ದಕ್ಷಿಣ ಕನ್ನಡ: ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ನೆಟ್ವರ್ಕಿಂಗ್ ತರಬೇತಿಯ ನಿರೀಕ್ಷೆಯಲ್ಲಿದ್ದಂತ ಸ್ವ ಉದ್ಯೋಗಾಕಾಂಕ್ಷಿಗಳಿಗೆ, ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಸುವರ್ಣಾವಕಾಶ ಒದಗಿಸಿ ಕೊಡಲಾಗಿದೆ. ಉಚಿತವಾಗಿ ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ನೆಟ್ವರ್ಕಿಂಗ್ ತರಬೇತಿಗೆ ( computer hardware and networking training ) ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಉಜಿರೆಯ ರುಡ್ ಸೆಟ್ ಸಂಸ್ಥೆಯು, 45 ದಿನಗಳವರೆಗೆ ಉಚಿತವಾಗಿ ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ನೆಟ್ವರ್ಕಿಂಗ್ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಿರೋದಾಗಿ ತಿಳಿಸಿದೆ.
ಅಂದಹಾಗೇ ಈ ತರಬೇತಿಯು ದಿನಾಂಕ 14-09-2022 ರಿಂದ ಆರಂಭಗೊಂಡು ದಿನಾಂಕ 28-10-2022ರಂದು ಮುಕ್ತಾಯಗೊಳ್ಳಲಿದೆ. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಅಲ್ಲದೇ ಸಮವಸ್ತ್ರ ಮತ್ತು ಉದ್ಯೋಗ ಕೈಗೊಳ್ಳೋದಕ್ಕೆ ಟೂಲ್ ಕಿಟ್ ಉಚಿತವಾಗಿ ನೀಡಲಾಗುತ್ತದೆ. ಇದಲ್ಲದೇ ಸ್ವ ಉದ್ಯೋಗ ಕೈಗೊಳ್ಳೋದಕ್ಕೆ ಬ್ಯಾಂಕ್ ನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ಕೂಡ ನೀಡಲಾಗುತ್ತದೆ.
ಈ ತರಬೇತಿಗೆ ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದವರಾಗಿರಬೇಕು. ಬಿಪಿಎಲ್ ಅಥವಾ ನರೇಗಾ ಕಾರ್ಡ್ ಹೊಂದಿರಬೇಕು. 18 ರಿಂದ 45 ವರ್ಷದವರೆಗೆ ವಯಸ್ಸಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
BIGG NEWS : ಉದ್ಯೋಗಿಗಳಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್ ; ಶೀಘ್ರ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ |DA Hike Date
ಹೆಚ್ಚಿನ ಮಾಹಿತಿಗಾಗಿ ರುಡ್ ಸೆಟ್ ಸಂಸ್ಥೆಯ www.rudsetujire.com ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲವೇ 9591044014, 9900793675, 9448484237, 9980885900 ಸಂಖ್ಯೆಗಳಿಗೆ ಸಂಪರ್ಕಿಸಿ.