ಚಿಕ್ಕಮಗಳೂರು: ಕರ್ನಾಟಕ ಪೊಲೀಸರೇ ( Karnataka Police ) ತಲೆತಗ್ಗಿಸುವಂತ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸೇರಿದಂತ ನಾಲ್ವರು ಪೊಲೀಸರು ಚಿನ್ನದ ವ್ಯಾಪಾರಿಯನ್ನು ದರೋಡೆ ಮಾಡಿದಂತ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಈ ಪ್ರಕರಣ ಸಂಬಂಧ ಆರೋಪಿಗಳ ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
BIG NEWS: ‘ಕರ್ನಾಟಕ’ದಲ್ಲಿ ಅವಧಿಗೆ ಮುನ್ನವೇ ‘ವಿಧಾನಸಭೆ’ಗೆ ಚುನಾವಣೆ.? | Karnataka Assembly Election 2023
ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಚಿಕ್ಕಮಗಳೂರಿನಲ್ಲಿ ನಡೆದ ಈ ಘಟನೆ. ಚಿನ್ನದ ವ್ಯಾಪಾರಿಯನ್ನು ಬೆದರಿಸಿದ ಪೊಲೀಸರು 5 ಲಕ್ಷ ದರೋಡೆ ಮಾಡಿದ್ದರು.
ಕಳೆದ ಮೇ ತಿಂಗಳಿನಲ್ಲಿ ಪ್ರಕರಣ ನಡೆದಿದ್ದು, ತಡವಾಗಿ ಬಯಲಿಗೆ ಬಂದಿತ್ತು. ದಾವಣಗೆರೆ ಮೂಲದ ಚಿನ್ನದ ವ್ಯಾಪಾರಿ ಭಗವಾನ್ ಎಂಬುವವರ ಪುತ್ರ ರೋಹಿತ್ ಚಿಕ್ಕಮಗಳೂರಿನಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದರು.
ಭ್ರಷ್ಟ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ಇಲಾಖೆಗಳು, ಎಲ್ಲಾ ನಿಗಮಗಳು ನಿಷ್ಕ್ರೀಯ – ಟ್ವಿಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ
ಭಗವಾನ್ ಪುತ್ರ ರೋಹಿತ್ 2 ಕೆಜಿ ಚಿನ್ನವನ್ನು ಬೇಲೂರಿನ ವರ್ತಕರಿಗೆ ನೀಡಲು ಹೋಗುವಾಗ ಪೊಲೀಸರು 10 ಲಕ್ಷ ನೀಡುವಂತೆ ಒತ್ತಾಯಿಸಿದ್ದರು. ಆಗ ಭಗವಾನ್ ಇದಕ್ಕೆ ಸಂಬಂಧಪಟ್ಟ ಕಾನೂನು ಬದ್ದ ದಾಖಲೆಗಳನ್ನು ನೀಡಿದರೂ ಕೂಡ ಪೊಲೀಸರು ಹಣಕ್ಕೆ ಒತ್ತಾಯಿಸಿದ್ದರು. ಪೊಲೀಸರ ಒತ್ತಾಯಕ್ಕೆ ಮಣಿದ ರೋಹಿತ್ ಕೊನೆಗೆ 5 ಲಕ್ಷ ನೀಡಿದ್ದರು.
ಈ ಎಲ್ಲಾ ಘಟನೆ ದಿನಾಂಕ 11-05-2022ರಂದು ನಡೆದಿತ್ತು. ಈ ಬಳಿಗ ಭಗವಾನ್ ಅವರ ರಾಜಸ್ಥಾನದ ಕುಟುಂಬಸ್ಥರೊಬ್ಬರು ಅನಾರೋಗ್ಯದಿಂದ ನಿಧನರಾಗಿದ್ದ ಕಾರಣ, ಅಲ್ಲಿಗೆ ತೆರಳಿದ್ದರು. ಆ ಕಾರ್ಯ ಮುಗಿಸಿಕೊಂಡು ಬಂದು ಸ್ನೇಹಿತರು, ಕುಟುಂಬಸ್ಥರ ಸಲಹೆಯ ಮೇರೆಗೆ, ದಿನಾಂಕ 17-11-2022ರಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ, ದೂರು ನೀಡಿದ್ದರು.
ಪತ್ನಿಯ ಜೀವನಾಂಶ ಹೆಚ್ಚಳ ಮಾಡುವುದಕ್ಕೆ ವಿಶೇಷ ಹಿಂದೂ ಕಾಯಿದೆಯಡಿ ನ್ಯಾಯಲಯಕ್ಕೆ ಅವಕಾಶವಿದೆ – ಹೈಕೋರ್ಟ್
ಬಂಗಾರದ ವ್ಯಾಪಾರಿ ಭಗವಾನ್ ನೀಡಿದಂತ ದೂರಿನ ಆಧಾರದ ಮೇಲೆ ಅಜ್ಜಂಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಲಿಂಗರಾಜು, ಪೇದೆಗಳಾದಂತ ಧನಪಾಲ್ ನಾಯಕ್, ಒಂಕಾರ ಮೂರ್ತಿ, ಶರತ್ ರಾಜ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇಂತಹ ಆರೋಪಿಗಳು ಜಾಮೀನಿಗಾಗಿ ಚಿಕ್ಕಮಗಳೂರು ಹೆಚ್ಚುವರಿ ವಿಶೇಷ ಜಿಲ್ಲಾ ನ್ಯಾಯಾಲಯಕ್ಕ ಅರ್ಜಿಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿ, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.