ಬೆಂಗಳೂರು: ಚಿನ್ನಾಭರಣ ದರದಲ್ಲಿ ಏರಿಳಿತವಾಗುತ್ತಿದೆ. ಕಳೆದ ವಾರಗಳೆಲ್ಲ ಚಿನ್ನದ ಬೆಲೆ ಕಡಿಮೆಯಾಗಿತ್ತು. ಇದೀಗ ದಿಢೀರ್ ಯಿಂದ ಬೆಲೆ ಏರಿಕೆ ಕಂಡಿದೆ.
BIGG BREAKING NEWS: ಜಾರ್ಖಂಡ್ ಗಣಿಗಾರಿಕೆ ಪ್ರಕರಣ: CM ಹೇಮಂತ್ ಸೊರೇನ್ ಸಹಾಯಕ ಪ್ರೇಮ್ ಪ್ರಕಾಶ್ ಅರೆಸ್ಟ್
ಕಳೆದ ಕೆಲವು ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನಾಭರಣಗಳ ದರಗಳು ನಿನ್ನೆ ಇಳಿಕೆ ಕಾಣಲಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 270 ರೂಪಾಯಿ ಏರಿಕೆ ನಂತರ 51,600 ರೂಪಾಯಿ ಇದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಹೆಚ್ಚಳವಾಗಿ 47,300 ರೂಪಾಯಿಯಲ್ಲಿ ಇದೆ.
ನಿನ್ನೆ ಈ ದರ 47,050 ರೂಪಾಯಿ ಇತ್ತು. ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 200 ರೂಪಾಯಿ ಏರಿಕೆಯಾಗಿದ್ದು, ಸದ್ಯ ಕೆಜಿ ಬೆಳ್ಳಿ 60,900 ರೂಪಾಯಿ ಇದೆ. ನಿನ್ನೆ ಕೆಜಿ ಬೆಳ್ಳಿ 61,700 ರೂಪಾಯಿಗೆ ಮಾರಾಟವಾಗಿತ್ತು. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ಎಲ್ಲಾ ಕಡೆ ಇಂದು ಇದೇ ಚಿನ್ನಾಭರಣಗಳ ದರಗಳು ಇವೆ.
ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಇತ್ತೀಚಿನ ಯುದ್ಧವು ಪ್ರಭಾವದ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಆ ಪರಿಣಾಮವೇ ಈ ಚಿನ್ನ ಗಣನೀಯವಾಗಿ ಏರಲು ಕಾರಣವಾಯಿತು.