ಬೆಳಗಾವಿ : ಮಳೆಗಾಲ ಆರಂಭವಾಗುತ್ತಿದ್ದಂತೆ ಜಲಪಾತಗಳು ತುಂಬಿ ಹರಿಯುತ್ತವೆ ಈ ವೇಳೆ ಸಹಜವಾಗಿ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುವುದು ಸಹಜ. ಪ್ರವಾಸಿಗರು ಜಲಪಾತಕ್ಕೆ ನೋಡಲು ಹೋದಾಗ ಸುಮ್ಮನೆ ಬರುವುದಿಲ್ಲ, ಏನಾದರೂ ಹುಚ್ಚಾಟ ಕೆಲಸ ಮಾಡಿ ತಮ್ಮ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಾರೆ.
ಇದೀಗ ಬೆಳಗಾವಿ ಜಿಲ್ಲೆಯ ಗೋಕಾಕ್ ಜಲಪಾತದಲ್ಲೂ ಕೂಡ ಇಂಥದ್ದೇ ಹಚ್ಚಾಟ ನಡೆಯುತ್ತಿದ್ದು, ಮಳೆ ಅಬ್ಬರದಿಂದ ಇದೀಗ ಗೋಕಾಕ್ ಜಲಪಾತ ಧುಮ್ಮಕಿ ಹರಿಯುತ್ತಿದೆ ಇದೆ ವೇಳೆ ಪ್ರವಾಸಿಗರು ಕೂಡ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗೋಕಾಕ್ ಜಲಪಾತಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ವೇಳೆ ಕೆಲ ಕಿಡಿಗೇಡಿ ಯುವಕರು ಜಲಪಾತದ ತುತ್ತ ತುದಿಗೆ ಹೋಗಿ ಸೆಲ್ಫಿ ತೆಗೆದುಕೊಳ್ಳುವುದು,ಕೆಲ ಪ್ರವಾಸಿಗರು ಜಲಪಾತದ ಸಮೀಪವೇ ಬಂಡೆ ಮೇಲೆ ಕುಳಿತು ಊಟ ಮಾಡುವುದು, ಮಾಡುತ್ತಿದ್ದಾರೆ. ಇನ್ನು ಇಷ್ಟೇಲ್ಲಾ ಅಗುತ್ತಿದ್ದರೂ ಜಲಪಾತಕ್ಕೆ ಭದ್ರತೆ ಒದಗಿಸದೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಚೂರು ಆಯ ತಪ್ಪಿದರೂ ಸಹ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇನ್ನು ಯುವಕರ, ಮಹಿಳೆಯರು ಮಕ್ಕಳು ಸೇರಿದಂತೆ ಜಲಪಾತದ ತುದಿಯಲ್ಲಿ ಹುಚ್ಚಾಟ ಮಾಡುತ್ತಿದ್ದಾರೆ.