ನವದೆಹಲಿ: ‘ಬಹಾವಲ್ಪುರ, ಮುರಿಡ್ಕೆಯ ಜಾಗತಿಕ ಭಯೋತ್ಪಾದನಾ ವಿಶ್ವವಿದ್ಯಾಲಯಗಳನ್ನು ಕೆಡವಲಾಗಿದೆ’ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಆಪರೇಷನ್ ಸಿಂಧೂರ್ ಬಗ್ಗೆ ಕೊಂಡಾಡಿದರು.
ಮೇ 12 ರಂದು ಪ್ರಧಾನಿ ಮೋದಿ ಅವರು ಆಪರೇಷನ್ ಸಿಂಧೂರ್ ಕೇವಲ ಹೆಸರಲ್ಲ, ಅದು ಕೋಟ್ಯಂತರ ಭಾರತೀಯರ ಭಾವನೆ ಎಂದು ಹೇಳಿದರು. ಆಪರೇಷನ್ ಸಿಂಧೂರ್ ನ್ಯಾಯಕ್ಕಾಗಿ ಎಂದು ಹೇಳಿದರು.
ಇಂದು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದಂತ ಅವರು, ಆಪರೇಷನ್ ಸಿಂಧೂರ್ ಯಶಸ್ವಿಯನ್ನು ದೇಶದ ಪ್ರತಿ ತಾಯಿ, ಸಹೋದರಿಯರಿಗೂ ಈ ಪರಾಕ್ರಮ ಸಮರ್ಪಣೆ ಮಾಡುತ್ತೇನೆ. ಆಪರೇಷನ್ ಸಿಂಧೂರ್ ಕೇವಲ ಹೆಸರವಲ್ಲ. ಇದೊಂದು ದೇಶದ ಪ್ರತಿಯೊಬ್ಬರ ಭಾವನಾತ್ಮಕ ಸಂಬಂಧವಾಗಿದೆ. ನ್ಯಾಯದ ವಿಧಾನವಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
#WATCH | During his address to the nation, Prime Minister Narendra Modi says "We have given full freedom to the Indian army to wipe out the terrorists and today every terrorist, every terror organisation knows 'ki hamari behano, betiyon ke maathe se Sindoor hatane ka anjaam kya… pic.twitter.com/egWxXfF1Vg
— ANI (@ANI) May 12, 2025
ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಕಳೆದ ಕೆಲವು ದಿನಗಳಲ್ಲಿ ನಾವೆಲ್ಲರೂ ದೇಶದ ಸಾಮರ್ಥ್ಯ ಮತ್ತು ತಾಳ್ಮೆಯನ್ನು ನೋಡಿದ್ದೇವೆ. ನಾನು ಸಶಸ್ತ್ರ ಪಡೆಗಳು, ಸೇನೆ, ಗುಪ್ತಚರ ಸಂಸ್ಥೆ ಮತ್ತು ವಿಜ್ಞಾನಿಗಳಿಗೆ ವಂದಿಸುತ್ತೇನೆ…” ಎಂದು ಹೇಳುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, “ಇಂದು, ನಾನು (ಸಶಸ್ತ್ರ ಪಡೆಗಳ) ಈ ಶೌರ್ಯ, ಶೌರ್ಯ, ಧೈರ್ಯವನ್ನು ನಮ್ಮ ದೇಶದ ಪ್ರತಿಯೊಬ್ಬ ತಾಯಿಗೆ, ದೇಶದ ಪ್ರತಿಯೊಬ್ಬ ಸಹೋದರಿಗೆ ಮತ್ತು ದೇಶದ ಪ್ರತಿಯೊಬ್ಬ ಪುತ್ರಿಗೆ ಅರ್ಪಿಸುತ್ತೇನೆ” ಎಂದು ಹೇಳುತ್ತಾರೆ.