ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಕಚೇರಿಯಿಂದ ಪತ್ರಕರ್ತರಿಗೆ ದೀಪಾವಳಿ ಉಡುಗೋರೆಯ ಜೊತೆಗೆ ಲಕ್ಷ ಲಕ್ಷ ಹಣ ಕೂಡ ಇಟ್ಟು ಕೊಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ವಿಷಯ ಬಿಸಿಬಿಸಿ ಚರ್ಚೆಯಾಗಿಯೂ ಕಾಂಗ್ರೆಸ್ ವರ್ಸಸ್ ಬಿಜೆಪಿ ನಡುವೆ ನಡೆಯುತ್ತಿದೆ. ಈ ನಡುವೆ ದೀಪಾವಳಿಗೆ ಉಡುಗೋರೆ ಕೊಡುವುದು ಕಾಮನ್, ಆದ್ರೇ ಅದರಲ್ಲಿ ಹಣ ಇಟ್ಟು ಕೊಟ್ಟಿರೋದು ಸಿಎಂಗೆ ಗೊತ್ತಿಲ್ಲ ಎಂಬುದಾಗಿ ಸಚಿವ ಆರ್ ಅಶೋಕ್ ( Minister R Ashok ) ಹೇಳಿದ್ದಾರೆ.
ನಗರದ ಗಂಗೊಂಡನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಕಂದಾಯ ಸಚಿವ ಆರ್ ಅಶೋಕ್, ದೀಪಾವಳಿ ಹಬ್ಬಕ್ಕೆ ಸಿಎಂ ಕಚೇರಿಯಿಂದ ಉಡುಗೋರೆ ಕೊಡುವುದು ಮಾಮೂಲಿಯಾಗಿದೆ. ಹೀಗೆ ಕೊಟ್ಟಂತ ಉಡುಗೋರೆಯಲ್ಲಿ ಹಣ ಇಟ್ಟು ಕೊಟ್ಟಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೊತ್ತಿಲ್ಲ. ಇದನ್ನು ಸಿಎಂ ಕೂಡ ಈಗಾಗಲೇ ಹೇಳಿದ್ದಾರೆ ಎಂದರು.
ಉದ್ಯೋಗಾಂಕ್ಷಿಗಳೇ ಗಮನಿಸಿ : ನ. 4 ರಂದು ಚಿತ್ರದುರ್ಗದಲ್ಲಿ ‘ಉದ್ಯೋಗ ಮೇಳ’ ಆಯೋಜನೆ
ಸಿಎಂ ಕಚೇರಿಯಿಂದ ದೀಪಾವಳಿ ಹಬ್ಬದ ( Deepavali Festival ) ಉಡುಗೋರೆಯ ಜೊತೆಗೆ ಹಣ ಇಟ್ಟು ಕಳುಹಿಸಲಾಗಿದೆ ಎನ್ನುಪ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗುತ್ತಿದೆ ಎಂದರು.
BIG BREAKING NEWS: ‘ರಾಜ್ಯ ಸರ್ಕಾರ’ದಿಂದ ‘ಆಡಳಿತ ಯಂತ್ರ’ಕ್ಕೆ ಚುರುಕು: ‘9 ಐಎಎಸ್ ಅಧಿಕಾರಿ’ಗಳಿಗೆ ಹುದ್ದೆ ಹಂಚಿಕೆ
ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವಂತ ನೈತಿಕ ಹಕ್ಕು ಇಲ್ಲ. ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್ ನವರು ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದರು.