ತುಮಕೂರು: ಕಲಬುರಗಿಯಲ್ಲಿ ಮಾಸ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ತಮ್ಮ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಬಾಲಕಿ ಮೇಲೆ ವಿದ್ಯಾರ್ಥಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿ ಗರ್ಭಾವತಿಯನ್ನಾಗಿ ಮಾಡಿದ ಘಟನೆ ನಡೆದಿದೆ.
BREAKING NEWS: ರಾಜ್ಯದಲ್ಲಿ ಬಿಎಫ್.7.ಎದುರಿಸಲು ಆರೋಗ್ಯ ಇಲಾಖೆ ಸಜ್ಜು; ಬೆಂಗಳೂರು ಆಸ್ಪತ್ರೆಯಲ್ಲಿ ಮೌಕ್ ಡ್ರಿಲ್
ತುಮಕೂರು ವಿವಿ ಸಂಶೋಧನಾ ವಿದ್ಯಾರ್ಥಿಯೊಬ್ಬ 17 ವರ್ಷದ ಬಾಲಕಿಯನ್ನ ಪುಸಲಾಯಿಸಿ ನಿರಂತರವಾಗಿ ಅತ್ಯಾಚಾರ ವೆಸಗಿ ಗರ್ಭಿಣಿ ಮಾಡಿದ್ದಾನೆ ಎನ್ನಲಾಗಿದೆ.ಬಾಲಕಿಯ ಮನೆಯಲ್ಲಿ ಬಡತನ ಇದ್ದ ಹಿನ್ನೆಲೆ ವಿದ್ಯಾರ್ಥಿ ಮನೆಗೆ ಮನೆಕೆಲಕ್ಕೆಂದು ಬಾಲಕಿ ಬರುತ್ತಿದ್ದಳು. ಈ ವೇಳೆ ಮನೆಯಲ್ಲಿ ಯಾರು ಇಲ್ಲದಾಗ ಆಕೆಯನ್ನ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು. ಸದ್ಯ ಸಂತ್ರಸ್ತೆ ಗರ್ಭಿಣಿಯಾಗಿದ್ದು, ಪೋಷಕರು ತುಮಕೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಿದ್ಯಾರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.