ಘಾಜಿಯಾಬಾದ್(ಉತ್ತರ ಪ್ರದೇಶ): ಕುರ್ಚಿಯ ಮೇಲೆ ಕುಳಿತಿದ್ದ ಜಿಮ್ ತರಬೇತುದಾರರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ ಜಿಮ್ ಟ್ರೈನರ್ ಕುರ್ಚಿಯ ಮೇಲೆ ಹಿಂದಕ್ಕೆ ಒರಗಿ ಕುಳಿತಿದ್ದರು. ಈ ವೇಳೆ ಅಲ್ಲಿ ಕೆಲಸ ವ್ಯಕ್ತಿಯೊಬ್ಬರು ಟ್ರೈನರ್ ಕುಳಿತಿದ್ದ ಕುರ್ಚಿಯನ್ನು ಕೊಂಚ ಮುಂದೆ ಸರಿಸಿದ್ದಾರೆ. ವೇಳೆ ಕುರ್ಚಿಯನ್ನು ಮುಂದೆ ಸರಿಸಿ ಕುಂತ ಟ್ರೈನರ್ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯಾವಳಿ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
एक और मौत LIVE-
कल ग़ाज़ियाबाद में 35 साल का एक जिम ट्रेनर सामान्य दिनों की तरह अपनी कुर्सी पर बैठा और वहीं हार्ट अटैक से उसकी मौत हो गई। सेकंड में मौत pic.twitter.com/7TX5di258X— Narendra nath mishra (@iamnarendranath) October 19, 2022
ಜಿಮ್ ಟ್ರೈನರ್ ಅನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಮೃತರನ್ನು ಆದಿಲ್ (33)ಎಂದು ಗುರುತಿಸಲಾಗಿದೆ.
ಕುಟುಂಬದವರ ಪ್ರಕಾರ, ಆದಿಲ್ ಕಳೆದ ಕೆಲವು ದಿನಗಳಿಂದ ಅವರು ಜ್ವರದಿಂದ ಬಳಲುತ್ತಿದ್ದರು. ಆದ್ರೂ ಅವರು ಜಿಮ್ಗೆ ಹೋಗುವುದನ್ನು ನಿಲ್ಲಿಸಲಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಕಾಂಪೊಂಡ್ ಗೋಡೆ ಕುಸಿತ, ಹಲವು ವಾಹನಗಳಿಗೆ ಹಾನಿ