ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕಳೆದ 3 ತಿಂಗಳಲ್ಲಿ 30 ಲಕ್ಷ ರೂ. ದಂಡ ವಸೂಲಿಯನ್ನು ಮಾಡಿರುವುದಾಗಿ ಜಿಬಿಎ ಆಯುಕ್ತ ಕೆ. ಎನ್ ರಮೇಶ್ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಾರ್ಡ್‌ಗಳ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಸ್ಥಳಗಳಲ್ಲಿ ಹಾಗೂ ಸರ್ಕಾರಿ ಸ್ವತ್ತುಗಳಲ್ಲಿ ಕಸಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು, ಶೇಖರಿಸುವುದನ್ನು ಅಥವಾ ಬ್ಲ್ಯಾಕ್ ಸ್ಪಾಟ್ ತಡೆಗಟ್ಟುವ ಸಲುವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಕ್ರಮಕೈಗೊಳ್ಳಲಾಗಿರುತ್ತದೆ.
ಕಸಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ಅಥವಾ ಬ್ಲ್ಯಾಕ್ ಸ್ಪಾಟ್ ತಡೆಗಟ್ಟುವ ಸಲುವಾಗಿ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಆರೋಗ್ಯ ಪರಿವೀಕ್ಷಕರು. ಲಿಂಕ್ ವರ್ಕರ್ ಹಾಗೂ ಪೌರ ಕಾರ್ಮಿಕರ ಮೇಲ್ವಿಚಾರಕರು ವಾರ್ಡ್ ವ್ಯಾಪ್ತಿಯಲ್ಲಿನ ನಿವಾಸಿಗಳನ್ನು ವಿಚಾರಿಸಿದಾಗ ಕೆಲವು ನಿವಾಸಿಗಳು ಕಸವನ್ನು ಸಂಗ್ರಹಿಸುವ ಆಟೋಗಳು ನಿಗದಿತ ವೇಳೆಯಲ್ಲಿ ಬರುತ್ತಿಲ್ಲ ಹಾಗೂ ಆಟೋಗಳು ಬರುವ ವೇಳೆಯಲ್ಲಿ ನಿವಾಸಿಗಳು ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದೇವೆ ಎಂದು ತಿಳಿಸಿರುತ್ತಾರೆ. ಈ ಸಂಬಂಧ ಕೆಲಸ ಕಾರ್ಯಗಳಿಗಾಗಿ ತೆರಳುವ ನಿವಾಸಿಗಳಿಗೆ ತ್ಯಾಜ್ಯವನ್ನು ಪ್ರತ್ಯೇಕಿಸಿ ಮನೆಯ ಬಾಗಿಲಿನ ಬಳಿ ಇಡಲು ಹಾಗೂ ಮನೆಯ ಬಾಗಿಲಿನ ಬಳಿ ಇಟ್ಟಿರುವ ಕಸಗಳನ್ನು ಸಂಗ್ರಹಿಸಲು ತ್ಯಾಜ್ಯ ಸಂಗ್ರಹಣೆದಾರರಿಗೆ ಸೂಚಿಸಲಾಗಿರುತ್ತದೆ.
ಮುಂದುವರೆದು, ಕಸಗಳನ್ನು ಎಲ್ಲೆಂದರಲ್ಲಿ ಎಸೆಯುವವರ ಅಥವಾ ಬ್ಲ್ಯಾಕ್ ಸ್ಪಾಟ್ ನಿರ್ಮಾಣ ಮಾಡುವವರ ವಿರುದ್ಧ ದಂಡ ವಿಧಿಸಲಾಗುತ್ತಿರುತ್ತದೆ ಹಾಗೂ ತ್ಯಾಜ್ಯವನ್ನು ಪ್ರತ್ಯೇಕಗೊಳಿಸಿ, ತ್ಯಾಜ್ಯ ಸಂಗ್ರಹಣಾದಾರರಿಗೆ ನೀಡಲು ಎನ್‌ಜಿಓ ಹಾಗೂ ಪಾಲಿಕೆಯ ಕಾರ್ಯನಿರ್ವಾಹಕ ಸಿಬ್ಬಂದಿಗಳಾದ ಕಿರಿಯ ಆರೋಗ್ಯ ಪರಿವೀಕ್ಷಕರು, ಲಿಂಕ್ ವರ್ಕರ್ ಹಾಗೂ ಪೌರ ಕಾರ್ಮಿಕರ ಮೇಲ್ವಿಚಾರಕರು ಸಾರ್ವಜನಿಕರಿಗೆ ಹಲವು ರೀತಿಯ ಜಾಗೃತಿ ಮತ್ತು ಅರಿವು ಮೂಡಿಸಿರುತ್ತಾರೆ. ಅನಧಿಕೃತವಾಗಿ ಎಲ್ಲೆಂದರಲ್ಲಿ ಕಸವನ್ನು ಎಸೆಯುವವರ ವಿರುದ್ಧ ಮಾರ್ಷಲ್ ಗಳು ಪ್ಯಾಟ್ರೊಲಿಂಗ್ ಮಾಡಿ, ಮೂರು ತಿಂಗಳ ಅವಧಿಯಲ್ಲಿ ಅಂದಾಜು ಮೊತ್ತ 30 ಲಕ್ಷದಷ್ಟು ದಂಡವನ್ನು ಸಂಗ್ರಹಿಸಲಾಗಿರುತ್ತದೆ.
BREAKING: ಬಾಲಿವುಡ್ ನಟ ರಣವೀರ್ ಸಿಂಗ್ ಗೆ ವಾಟ್ಸ್ ಆಪ್ ಮೂಲಕ ಬೆದರಿಕೆ: ಕೋಟಿ ಕೋಟಿ ಹಣಕ್ಕೆ ಬೇಡಿಕೆ








