Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ಗಾಯ : ಸ್ಕ್ಯಾನಿಂಗ್ ವರದಿಯಲ್ಲೂ ಸ್ಪಷ್ಟತೆಯಿಲ್ಲ!

15/04/2026 9:53 AM

ಲೇಖನಿಯನ್ನೇ ಶಕ್ತಿಯಾಗಿಸಿಕೊಂಡಿದ್ದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಓಂಕಾರ್ ಎಸ್ ವಿ ತಾಳಗುಪ್ಪ ವಿಧಿವಶ

15/04/2026 9:44 AM

US ಜೊತೆಗಿನ ಮಾಲ್ಡೀವ್ಸ್ ಸಂಬಂಧ ಬಿರುಕು:ಅಮೆರಿಕ ರಾಯಭಾರಿ ಜೊತೆಗಿನ ಮುಯಿಝು ಭೇಟಿ ಕೊನೆ ಕ್ಷಣದಲ್ಲಿ ರದ್ದು!

15/04/2026 9:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಾಬು ಜೀ, ಡಾ.ಬಿ.ಆರ್‌.ಅಂಬೇಡ್ಕರ್ ಜನ್ಮ ದಿನ ; ಅದ್ದೂರಿ ಆಚರಣೆಗೆ ಮದ್ದೂರು ತಾಲೂಕು ಆಡಳಿತ ಸಿದ್ದತೆ
KARNATAKA

ಬಾಬು ಜೀ, ಡಾ.ಬಿ.ಆರ್‌.ಅಂಬೇಡ್ಕರ್ ಜನ್ಮ ದಿನ ; ಅದ್ದೂರಿ ಆಚರಣೆಗೆ ಮದ್ದೂರು ತಾಲೂಕು ಆಡಳಿತ ಸಿದ್ದತೆ

By kannadanewsnow0524/03/2026 8:49 PM

ಮಂಡ್ಯ :- ಬಾಬು ಜಗಜೀವನ್ ರಾಂ ಹಾಗೂ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮದ್ದೂರು ತಾಲೂಕಿನ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಇಬ್ಬರು ಮಹನೀಯರ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಲು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ಹಾಗೂ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಏ.5 ರಂದು ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಂ ಅವರ ಜಯಂತಿ ಮತ್ತು ಏ.14 ರಂದು ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಜಯಂತಿಯಂದು ನಗರದಿಂದ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದಿಂದ ಮೆರವಣಿಗೆ ಹೊರಟು ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾ ತಂಡಗಳು, ಸ್ಥಬ್ಧ ಚಿತ್ರಗಳು, ವಿವಿಧ ಶಾಲೆಗಳ ಮಕ್ಕಳೊಂದಿಗೆ ಮೆರವಣಿಗೆ ಸಾಗಿ ನಗರಸಭಾ ಕಛೇರಿ ಮುಂಭಾಗ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ, ಕ್ರೀಡಾ ಸಾಧಕರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಪಂ ಮಾಜಿ ಸದಸ್ಯ ಮಾದೇಶ್ ಮಾತನಾಡಿ, ಇಬ್ಬರ ಮಹಾನ್ ವ್ಯಕ್ತಿಗಳ ಜಯಂತೋತ್ಸವನ್ನು ಅಂದೇ ಆಚರಿಸಬೇಕು ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಅವರ ಜಯಂತಿಯ ಪ್ರತಿ ಕಾರ್ಯಕ್ರಮಗಳಲ್ಲಿಯೂ ಅಧಿಕಾರಿಗಳು, ಸಿಬ್ಬಂದಿಗಳು ಗೈರಾಗುತ್ತಿದ್ದು, ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಹಾಗೂ ನಗರದ ಎಲ್ಲಾ ಸರ್ಕಾರಿ ಕಛೇರಿಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಬೇಕೆಂದು ಹೇಳಿದರು.

ಸಭೆಯಲ್ಲಿ ತಾಪಂ ಇಓ ರಾಮಲಿಂಗಯ್ಯ, ಸಮಾಜ ಕಲ್ಯಾಣಾಧಿಕಾರಿ ನಾಗರಾಜ್ ವಿವಿಧ ಇಲಾಖೆಗಳ ಅಧಿಕಾರಿಗಳು ಮುಖಂಡರಾದ ಸೋಮನಹಳ್ಳಿ ಅಂದಾನಿ, ಬೋರಯ್ಯ, ಚಿದಂಬರ ಮೂರ್ತಿ, ಶಂಕರ್ ಮತ್ತಿತರರು ಇದ್ದರು.

ವರದಿ : ಗಿರೀಶ್ ರಾಜ್ ಮಂಡ್ಯ

Share. Facebook Twitter LinkedIn WhatsApp Email

Related Posts

ಲೇಖನಿಯನ್ನೇ ಶಕ್ತಿಯಾಗಿಸಿಕೊಂಡಿದ್ದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಓಂಕಾರ್ ಎಸ್ ವಿ ತಾಳಗುಪ್ಪ ವಿಧಿವಶ

15/04/2026 9:44 AM2 Mins Read

ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ; 17 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ

15/04/2026 9:27 AM1 Min Read

ALERT : ಒಂದು ಲೀಟರ್ `ಕೂಲ್ ಡ್ರಿಂಕ್ಸ್’ನಲ್ಲಿ ಎಷ್ಟು ಸಕ್ಕರೆ ಇರಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

15/04/2026 9:13 AM2 Mins Read
Recent News

​ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ಗಾಯ : ಸ್ಕ್ಯಾನಿಂಗ್ ವರದಿಯಲ್ಲೂ ಸ್ಪಷ್ಟತೆಯಿಲ್ಲ!

15/04/2026 9:53 AM

ಲೇಖನಿಯನ್ನೇ ಶಕ್ತಿಯಾಗಿಸಿಕೊಂಡಿದ್ದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಓಂಕಾರ್ ಎಸ್ ವಿ ತಾಳಗುಪ್ಪ ವಿಧಿವಶ

15/04/2026 9:44 AM

US ಜೊತೆಗಿನ ಮಾಲ್ಡೀವ್ಸ್ ಸಂಬಂಧ ಬಿರುಕು:ಅಮೆರಿಕ ರಾಯಭಾರಿ ಜೊತೆಗಿನ ಮುಯಿಝು ಭೇಟಿ ಕೊನೆ ಕ್ಷಣದಲ್ಲಿ ರದ್ದು!

15/04/2026 9:43 AM

SHOCKING : ಚಿಕಿತ್ಸೆಯ ಹೆಸರಿನಲ್ಲಿ ಮಾರಕ ಇಂಜೆಕ್ಷನ್: ಒಂದೇ ಆಸ್ಪತ್ರೆ ಸೂಜಿಯಿಂದ 331 ಮುಗ್ಧ ಮಕ್ಕಳಿಗೆ `HIV’ ಪಾಸಿಟಿವ್!

15/04/2026 9:43 AM
State News
KARNATAKA

ಲೇಖನಿಯನ್ನೇ ಶಕ್ತಿಯಾಗಿಸಿಕೊಂಡಿದ್ದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಓಂಕಾರ್ ಎಸ್ ವಿ ತಾಳಗುಪ್ಪ ವಿಧಿವಶ

By kannadanewsnow0915/04/2026 9:44 AM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ತಾಳಗುಪ್ಪದ ಮಣ್ಣಿನಲ್ಲಿ ಹುಟ್ಟಿ, ಅನ್ಯಾಯದ ವಿರುದ್ಧ ಗುಡುಗುತ್ತಿದ್ದ ಆ ಧ್ವನಿ ಇಂದು ಮೌನವಾಗಿದೆ. ಪತ್ರಕರ್ತರಾಗಿ,…

ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ; 17 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ

15/04/2026 9:27 AM

ALERT : ಒಂದು ಲೀಟರ್ `ಕೂಲ್ ಡ್ರಿಂಕ್ಸ್’ನಲ್ಲಿ ಎಷ್ಟು ಸಕ್ಕರೆ ಇರಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

15/04/2026 9:13 AM

BIG NEWS : ರಾಜ್ಯ ಸರ್ಕಾರಿ ನೌಕರರ ವಿರುದ್ಧ ಸಾಬೀತಾದ ಆರೋಪಕ್ಕೆ ‘ಯಾವ ಶಿಕ್ಷೆ’? ಇಲ್ಲಿದೆ ಮಾಹಿತಿ

15/04/2026 9:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.