ಬೆಂಗಳೂರು: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ( ಕಟ್ಟಡಗಳ ನಿರ್ಮಾಣದ ಮೇಲೆ ಜಿಲ್ಲಾ ಪಂಚಾಯತ್ ಗಳ, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳ ನಿಯಂತ್ರಣ ) ಮಾದರಿ ಉಪವಿಧಿ 2015ಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ಅದರ ಹಿನ್ನಲೆಯಲ್ಲಿಯೇ ಕೈಗಾರಿಕಾ ಕಟ್ಟಗಳಿಗೆ ಬಿಡಬೇಕಾಗಿರುವಂತ ಖಾಲಿ ಜಾಗವನ್ನು ನಿಗದಿ ಪಡಿಸಿದೆ.
ಉಡಪಿ: ಮಣಿಪಾಲದಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವು
ಈ ಸಂಬಂಧ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿರುವಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಮಾದರಿ ಉಪ ವಿಧಿಗಳು 2015ರ 18ನೇ ಉಪವಿಧಿಯ ಖಂಡ (4)ಕ್ಕೆ ತಿದ್ದುಪಡಿಯನ್ನು ತರಲಾಗಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ: ರಸ್ತೆ ಅವ್ಯವಸ್ಥೆಯ ಬಗ್ಗೆ ಪಾಲಿಕೆ ವಿರುದ್ದ ನಾಗರೀಕರ ಪ್ರತಿಭಟನೆ
ತಿದ್ದುಪಡಿ ಅಧಿಸೂಚನೆಯಂತೆ ಕೈಗಾರಿಕಾ ಕಟ್ಟಡಗಳಿಗೆ ಬಿಡಬೇಕಾಗಿರುವಂತ ಖಾಲಿ ಜಾಗದ ಕನಿಷ್ಠ ಅಳತೆಯನ್ನು ಈ ಕೆಳಕಂಡಂತೆ ನಿಗದಿ ಪಡಿಸಿದೆ.
- 255 ಚದರ ಮೀಟರ್ ಗಳವರೆಗಿನ ಪ್ಲಾಟುಗಳಿಗೆ ಮುಂಭಾಗದಲ್ಲಿ 3 ಮೀಟರ್, ಎಡಬದಿ, ಬಲಬದಿ ಹಾಗೂ ಹಿಂಬದಿಯಲ್ಲಿ 1.5 ಮೀಟರ್ ಬಿಡಬೇಕು.
- 510 ಚದರ ಮೀಟರ್ ಪ್ಲಾಟ್ ಗಳಿಗೆ ಮುಂಭಾಗದಲ್ಲಿ 3 ಮೀಟರ್, ಎಡಬದಿ, ಬಲಬದಿ ಹಾಗೂ ಹಿಂಬದಿಯಲ್ಲಿ 2.5 ಮೀಟರ್ ಖಾಲಿ ಜಾಗ ಬಿಡುವುದು.
- 1020 ಚದರ ಮೀಟರ್ ಪ್ಲಾಟ್ ಗಳಿಗೆ ಮುಂಭಾಗದಲ್ಲಿ 4.5 ಮೀಟರ್, ಎಡಬದಿ, ಬಲಬದಿ ಹಾಗೂ ಹಿಂಬದಿಯಲ್ಲಿ 3 ಮೀಟರ್ ಖಾಲಿ ಜಾಗ ಬಿಡುವುದು.
- 2025 ಚದರ ಮೀಟರ್ ಪ್ಲಾಟುಗಳಿಗೆ ಮುಂಭಾಗದಲ್ಲಿ 8 ಮೀಟರ್, ಎಡಬದಿ, ಬಲಬದಿ ಹಾಗೂ ಹಿಂಬದಿಯಲ್ಲಿ 4.50 ಮೀಟರ್ ಖಾಲಿ ಬಿಡುವುದು.
- 4050 ಚದರ ಮೀಟರ್ ಪ್ಲಾಟ್ ಗಳಿಗೆ ಮುಂಭಾಗದಲ್ಲಿ 9 ಮೀಟರ್, ಎಡಬದಿ, ಬಲಬದಿ ಹಾಗೂ ಹಿಂಬದಿಯಲ್ಲಿ 6 ಮೀಟರ್ ಖಾಲಿ ಬಿಡಬೇಕು.
- 8100 ಕ್ಕಿಂತ ಹೆಚ್ಚು ಚದರ ಮೀಟರ್ ವಿಸ್ತೀರ್ಣದ ಪ್ಲಾಟ್ ಗಳಿಗೆ ಮುಂಭಾಗದಲ್ಲಿ 10 ಮೀಟರ್, ಎಡಬದಿ, ಬಲಬದಿ ಹಾಗೂ ಹಿಂಬದಿಯಲ್ಲಿ 8 ಮೀಟರ್ ಬಿಡುವುದು.
ಈ ಕಟ್ಟಡಗಳು ಲಿಫ್ಟ್ ಗಳನ್ನು ಹೊಂದಿಲ್ಲದಿದ್ದರೇ ಅವುಗಳ ಗರಿಷ್ಠ ಎತ್ತರವು 2 ಮಹಡಿಗಳು ಆಗಿರಬೇಕು. ಕೈಗಾರಿಕಾ ಕಟ್ಟಗಳ ಗರಿಷ್ಠ ಎತ್ತರದ ಎಳತೆಯು 15 ಮೀಟರ್ ಗಳಾಗಿರಬೇಕು. ಇಂತಹ ಎತ್ತರವುಳ್ಳ ಕೈಗಾರಿಕಾ ಕಟ್ಟಡಗಳಿಗೆ ಸಂಬಂಧಿಸಿದಂತೆ ಅನುಮತಿಸಬಹುದಾದ ಗರಿಷ್ಠ ನೆಲದ ವ್ಯಾಪ್ತಿ ಶೇ.65ರಷ್ಟು ಆಗಿರಬೇಕು ಎಂದು ತಿಳಿಸಿದೆ. ಈ ಗೆಜೆಟ್ ಅಧಿಸೂಚನೆ ಪ್ರಕಟಗೊಂಡ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಯನ್ನು ಸಲ್ಲಿಸುವಂತೆ ಸೂಚಿಸಿದೆ.