ವಿಜಯಪುರ: ಗಣಪತಿ ದರ್ಶನಕ್ಕೆಂದು ಹರಿದುಬಂದ ಭಕ್ತರ ಭಾರ ತಾಳಲಾರದೇ ಸಾರ್ವಜನಿಕ ಗಣೇಶ ಮಂಟಪವೊಂದು ಕುಸಿದು ಬಿದ್ದಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಇಲ್ಲಿನ ವಿವೇಕಾನಂದ ವೃತ್ತದಲ್ಲಿ ಗೋಪುರ ಆಕಾರ ಹಾಗೂ ಸ್ವರ್ಣ ವರ್ಣದ ದೇವಾಲಯದ ಮಾದರಿಯಲ್ಲಿ ಈ ಗಣೇಶ ಮಂಟಪವನ್ನು ನಿರ್ಮಿಸಲಾಗಿತ್ತು. ಇಲ್ಲಿಗೆ ಜನ ಸಾಗರವೇ ಹರಿದುಬಂದ ಪರಿಣಾಮ ಭಾರ ತಾಳದೇ ನೆಲಕ್ಕುರುಳಿದೆ. ಪರಿಣಾಮ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಘಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ನೆಲಕ್ಕುರುಳಿದ ಮಂಟಪದಡಿ ಸಿಲುಕಿದ್ದ ಜನರನ್ನು ರಕ್ಷಸಿದ್ದಾರೆ.
BIGG NEWS : ಒಂದೇ ಕುಟುಂಬದ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ; ‘ಸ್ವಾಮಿ’ ಎಂದು ಹೇಳಿಕೊಳ್ತಿದ್ದ ‘ಕಾಮಿ’ ಅರೆಸ್ಟ್
BREAKING NEWS: ಹರಿಯಾಣದ ಎಂಡಿಯು ಕ್ಯಾಂಪಸ್ನಲ್ಲಿ ವಿದ್ಯಾರ್ಥಿ ಮತ್ತು ಇತರ ಮೂವರ ಮೇಲೆ ಗುಂಡಿನ ದಾಳಿ | MDU campus
ಬೆಂಗಳೂರಿನ ಜನತೆ ಗಮನಕ್ಕೆ: ನಾಳೆಯಿಂದ ಸೆ.18ರವರೆಗೆ ವೋಟರ್ ಐಟಿಗೆ ಆಧಾರ್ ಸಂಖ್ಯೆ ಲಿಂಕ್ ಜೋಡಣೆ ವಿಶೇಷ ಅಭಿಯಾನ