ತುಮಕೂರು: ಶಿವಮೊಗ್ಗದಲ್ಲಿನ ಸಾವರ್ಕರ್ ಫ್ಲೆಕ್ಸ್ ವಿವಾದ ಹಸಿಯಾಗಿರೋ ಮುನ್ನವೇ, ಇತ್ತ ತುಮಕೂರಿನ ಮಧುಗಿರಿಯಲ್ಲಿ ಗೋಡ್ಸೆಗೆ ಸ್ವಾತಂತ್ರ್ಯ ಸೇನಾನಿಯ ಪಟ್ಟವನ್ನು ಕಟ್ಟಲಾಗಿದೆ. ಅಲ್ಲದೇ ಗೋಡ್ಸೆ ಪೋಟೋ ಕೆಳಗೆ ಗಾಂಧೀಜಿಯವರ ಪೋಟೋ ಇರುವಂತ ಫ್ಲೆಕ್ಸ್ ಹಾಕಿ ವಿಕೃತಿಯನ್ನು ಕಿಡಿಗೇಡಿಗಳು ಮೆರೆದಿದ್ದಾರೆ.
BIG NEWS: ಪಿಸ್ತೂಲ್ ಇಲ್ಲದೇ ಬರೀ ಗುಂಡು ಇಟ್ಟುಕೊಳ್ಳೋದು ತಪ್ಪಲ್ಲ – ಹೈಕೋರ್ಟ್
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಂಡಿನ ಮಾರಮ್ಮ ದೇವಾಲಯದ ಬಳಿಯಲ್ಲಿ ಕಿಡಿಗೇಡಿಗಳು ಅಳವಡಿಸಿದ್ದಂತ ಫ್ಲೆಕ್ಸ್ ಈಗ ವಿವಾದಕ್ಕೆ ಗುರಿಯಾಗಿದೆ. ಅಲ್ಲದೇ ಗೋಡ್ಸೆ ಪೋಟೋವನ್ನ ಸ್ವಾತಂತ್ರ್ಯ ಸೇನಾನಿಗಳ ಜೊತೆಗೆ ಹಾಕಿದ್ದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
BIGG NEWS: ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್; ಇಂದಿನಿಂದ 5 ದಿನ ಶಬರಿಮಲೆ ದೇಗುಲದ ಬಾಗಿಲು ಓಪನ್
ಕಿಡಿಗೇಡಿಗಳು ಕೃತ್ಯ ಬಹಿರಂಗವಾಗುತ್ತಿದ್ದಂತೆ ಘಟನಾಸ್ಥಳಕ್ಕೆ ಮಧುಗಿರಿ ಪುರಸಭೆ ಅಧಿಕಾರಿಗಳು ಭೇಟಿ ನೀಡಿ ವಿವಾದಿತ ಪ್ಲೆಕ್ಸ್ ತೆರವು ಮಾಡಲಾಗಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
BIGG NEWS : ʻದೇಶದ್ರೋಹಿ ಕೃತ್ಯ ಎಸಗುವವರಿಗೆ ಯುಪಿ ಮಾದರಿʼ : ಬಿಜೆಪಿ ಶಾಸಕ ರೇಣುಕಾಚಾರ್ಯ ಆಕ್ರೋಶ