ಗದಗ : ಒಂದೆಡೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಬೇಸತ್ತು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಖಾಸಗಿಯಾಗಿ ಕೈಸಾಲ ಮಾಡಿ ಅವರ ಕಿರುಕುಳಕ್ಕೆ ಹಲವರು ಬೀದಿಗೆ ಬಂದಿದ್ದಾರೆ, ಇದೀಗ ಗದಗದಲ್ಲಿ ಅಮಾನವೀಯ ಘಟನೆ ನಡೆದಿದ್ದು ಕೇವಲ 10,000 ಪಡೆದ ಸಾಲವನ್ನ ತೀರಿಸಲು ಸ್ವಲ್ಪ ತಡವಾಗಿದ್ದಕ್ಕೆ ವೃದ್ಧೆಯನ್ನು ಹೊರಹಾಕಿ ಬಡ್ಡಿ ದಂಧೆ ಕೂಡ ದರ್ಪ ತೋರಿರುವ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಹೌದು ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಮನೆಯಿಂದ ಉಷಾ ದೇವಿಯನ್ನು ಮೌಲಾಸಾಬ್ ಎನ್ನುವ ವ್ಯಕ್ತಿ ಹೊರಹಾಕಿ ಮನೆಗೆ ಬೀಗ ಹಾಕಿದ್ದಾನೆ. ಮೌಲಾಸಾಬ್ ಬಳಿ 10 ಸಾವಿರ ಸಾಲವನ್ನು ಪಡೆದುಕೊಂಡಿದ್ದರು. ಸಹೋದರ ಚಿಕಿತ್ಸೆಗೆಂದು ಉಷಾದೇವಿ ಸಾಲ ಪಡೆದಿದ್ದರು. ಕಾಲಾವಕಾಶ ಕೇಳಿದರು ಕೂಡ ಬಡ್ಡೆ ದಂಧೆ ಕೋರ ದರ್ಪ ತೋರಿದ್ದಾನೆ. ಮನೆಯಿಂದ ವೃದ್ಧೆಯನ್ನು ಮೌಲಾಸಾಬ್ ಹೊರಹಾಕಿದ್ದಾನೆ. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.