ತಮಿಳುನಾಡು : ಮನೆಯೊಂದರಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಚೆಂಗಲ್ಪೇಟ್ ಜಿಲ್ಲೆಯ ಗುಡುವಂಚೇರಿ ಪಟ್ಟಣದಲ್ಲಿ ನಡೆದಿದೆ.
BIGG NEWS : ಮೈಸೂರಿನ ಕೆ.ಆರ್ ನಗರದಲ್ಲಿ ರಸ್ತೆಯಲ್ಲಿ ಅಟ್ಟಾಡಿಸಿದ ಚಿರತೆಯ ಅಘಾತಕಾರಿ video viral | WATCH
ಗುಡುವಂಚೇರಿಯಲ್ಲಿರುವ ಆರ್ಆರ್ ಬೃಂದಾವನ ಅಪಾರ್ಟ್ಮೆಂಟ್ನಲ್ಲಿ ವರ್ಷದ ಹಿಂದೆ ನಿಧನರಾದ ವೆಂಕಟರಾಮನ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ದುಬೈನಲ್ಲಿ ನೆಲೆಸಿರುವ ಅವರ ಪತ್ನಿ ಗಿರಿಜಾ (63) ಸೇರಿದಂತೆ ಅವರ ಕುಟುಂಬದವರು ವೆಂಕಟರಮಣವರಿಗೆ ವರ್ಷದ ಪೂಜೆ ಮಾಡಲೆಂದು ಮನೆಗೆ ಬಂದಿದ್ದರು ಎನ್ನಲಾಗುತ್ತಿದೆ.
ಮನೆಯಲ್ಲಿ ಗಿರಿಜಾ, ಅವರ ಸಹೋದರಿ ರಾಧಾ (55), ಅವರ ಸಹೋದರ ರಾಜಕುಮಾರ್ (47), ರಾಜ್ಕುಮಾರ್ ಅವರ ಪತ್ನಿ ಭಾರ್ಗವಿ (35) ಮತ್ತು ಅವರ ಪುತ್ರಿ ಆರಾಧನಾ (6) ಇದ್ದರು ಎನ್ನಲಾಗುತ್ತಿದೆ.
ಫ್ರಿಡ್ಜ್ ಸ್ಫೋಟಗೊಂಡ ಶಬ್ದ ಕೇಳಿ ಅಪಾರ್ಟ್ಮೆಂಟ್ನಲ್ಲಿದ್ದ ಅಕ್ಕಪಕ್ಕದವರು ಅಲ್ಲಿಗೆ ಧಾವಿಸಿ ಬಾಗಿಲು ಒಡೆದು ಹಾಕಲು ಯತ್ನಿಸಿದ್ದಾರೆ.
ದುರದೃಷ್ಟವಶಾತ್ ಸ್ಫೋಟದ ವಿಷಪೂರಿತ ಹೊಗೆ ಸೇವನೆಯಿಂದ ಗಿರಿಜಾ, ರಾಧಾ ಮತ್ತು ರಾಜ್ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭಾರ್ಗವಿ ಮತ್ತು ಆರಾಧನಾ ಅವರನ್ನು ಕ್ರೋಂಪೇಟೆ ಸರ್ಕಾರಿ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.