ನವದೆಹಲಿ: ಅನೇಕ ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಯೋಜನೆಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೇರಿದಂತೆ ಅನೇಕ ರೀತಿಯ ಯೋಜನೆಗಳನ್ನು ಕೇಂದ್ರ ಸರ್ಕಾರವು ನೀಡುತ್ತಿದೆ. ಈ ನಡುವೆ ಈಗ ಭಾರತ ಸರ್ಕಾರವು ದೇಶಾದ್ಯಂತ 5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಯೋಜನೆಯನ್ನು ತರುತ್ತಿದೆ ಎಂದು ಹೇಳಲಾಗುತ್ತಿರುವ ಸುದ್ದಿಯೊಂದು ಹರಿದಾಡುತ್ತಿದೆ. ಕೇಂದ್ರ ಶಿಕ್ಷಣ ಸಚಿವಾಲಯವು 5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ಗಳನ್ನು ನೀಡುತ್ತದೆ ಎಂಬ ಸಂದೇಶ ವೈರಲ್ ಆಗುತ್ತಿದೆ, ವೈರಲ್ ಆಗಿರುವ ಸುದ್ದಿ ಹಿಂದೆ ಪಿಐಬಿ ಪ್ಯಾಕ್ಟ್ ಚೆಕ್ ಸರಿಯಾದ ಮಾಹಿತಿಯನ್ನುನೀಡಿದೆ.
ಕೇಂದ್ರ ಶಿಕ್ಷಣ ಸಚಿವಾಲಯವು 5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ಗಳನ್ನು ನೀಡುತ್ತದೆ ಎಂಬ ಸಂದೇಶದೊಂದಿಗೆ ಚರ್ಚೆ ಪ್ರಾರಂಭವಾಯಿತು. ಈ ಸಂದೇಶದ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಈಗ ಪಿಐಬಿ ಈ ಪ್ರಶ್ನೆಗಳಿಗೆ ಉತ್ತರಿಸಿದೆ.
ಈ ಸಂದೇಶವು ಉಚಿತ ಲ್ಯಾಪ್ ಟಾಪ್ ಗಾಗಿ ಲಿಂಕ್ ಅನ್ನು ಸಹ ಒಳಗೊಂಡಿದೆ.
‘ಕೇಂದ್ರ ಶಿಕ್ಷಣ ಸಚಿವಾಲಯವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಗಳನ್ನು ವಿತರಿಸುತ್ತಿದೆ’ ಎಂದು ಆ ಸಾಮಾಜಿಕ ಮಾಧ್ಯಮ ವೈರಲ್ ಸಂದೇಶದಲ್ಲಿ ಬರೆಯಲಾಗಿದೆ. ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸಹಾಯ ಮಾಡಲು ಮತ್ತು ಮಕ್ಕಳಿಗೆ ಆನ್ಲೈನ್ ಕಲಿಕಾ ಸೌಲಭ್ಯವನ್ನು ಒದಗಿಸಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಉಚಿತ ಲ್ಯಾಪ್ ಟಾಪ್ ಗೆ ನೀವು ಅರ್ಹರಾಗಿದ್ದೀರೋ ಇಲ್ಲವೋ ಎಂಬುದನ್ನು ತಿಳಿಯಲು ಲಿಂಕ್ ಮಾಡಿ ಅಂತ ತಿಳಿಸಿದೆ. ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (ಪಿಐಬಿ) ತನ್ನ ಫ್ಯಾಕ್ಟ್ ಚೆಕ್ ಟ್ವಿಟರ್ ಹ್ಯಾಂಡಲ್ನಲ್ಲಿ ಈ ವೈರಲ್ ಸಂದೇಶದ ಸತ್ಯವನ್ನು PibbactCheck ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸಂದೇಶವು ನಕಲಿ ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ. ಅಂತಹ ಯಾವುದೇ ಯೋಜನೆಯನ್ನು ಭಾರತ ಸರ್ಕಾರವು ನಡೆಸುತ್ತಿಲ್ಲ ಅಂತ ತಿಳಿಸಿದೆ.
ಸಂದೇಶದೊಂದಿಗೆ ಬರುವ ಯಾವುದೇ ಲಿಂಕ್ ಕ್ಲಿಕ್ ಮಾಡಿ, ಅಂತಹ ತಪ್ಪನ್ನು ಮಾಡುವ ಮೂಲಕ, ನೀವು ಆನ್ ಲೈನ್ ವಂಚನೆಯ ಬಲಿಪಶುವಾಗಬಹುದು. ಭಾರತ ಸರ್ಕಾರದ ಯಾವುದೇ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಗಾಗಿ, ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ. ಇದಲ್ಲದೆ, 8799711259 ಪಿಐಬಿಗೆ ಸಂದೇಶವನ್ನು ಕಳುಹಿಸುವ ಮೂಲಕ ಅಥವಾ socialmedia@pib.gov.in ಇಮೇಲ್ ಮಾಡುವ ಮೂಲಕ ವೈರಲ್ ಸಂದೇಶದ ಸತ್ಯವನ್ನು ನೀವು ಕಂಡುಹಿಡಿಯಬಹುದು ಅಂತ ತಿಳಿಸಿದೆ.
A text message with a website link is circulating on social media which claims that @EduMinOfIndia is offering 500,000 free laptops to all students #PIBFactCheck
▶️The circulated link is #Fake
▶️The government is not running any such scheme pic.twitter.com/B0LdPI8un2
— PIB Fact Check (@PIBFactCheck) September 19, 2022