ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ನಿಮ್ಮ ಎಲ್ಲಾ ರೀತಿಯ ಅನಾರೋಗ್ಯ ಸಮಸ್ಯೆಗೆ ತಪಾಸಣೆಗೆ ಒಳಪಟ್ಟು, ಚಿಕಿತ್ಸೆ ಪಡೆಯಲು ಇದೊಂದು ಸದಾವಕಾಶವಾಗಿದೆ.
ಈ ಕುರಿತಂತೆ ಶಿಬಿರದ ಸಂಚಾಲಕ ಶಿವಕುಮಾರ ಈ ಉಳವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 19-01-2026ರಂದು ಉಳವಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಳಗ್ಗೆ 10.30ರಿಂದ 2 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿರುವುದಾಗಿ ತಿಳಿಸಿದ್ದಾರೆ.
ಗ್ರಾಮ ಪಂಚಾಯ್ತಿ ದೂಗೂರು ಹಾಗೂ ಉಳವಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಹಕಾರದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಶಿರಸಿಯ ಆಸ್ಮಿತೆ ಫೌಂಡೇಶನ್, ಶಿವಮೊಗ್ಗದ ಮಲೆನಾಡು ಕ್ಯಾನ್ಸರ್ ಆಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಏನೆಲ್ಲ ತಪಾಸಣೆ ಗೊತ್ತಾ?
ರಕ್ತದೊತ್ತಡ, ಮಧು ಮೇಹ ಪರೀಕ್ಷೆ, ಸಾಮಾನ್ಯ ಆರೋಗ್ಯ ತಪಾಸಣೆ, ಬಾಯಿ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತದೆ. ಇದಷ್ಟೇ ಅಲ್ಲದೇ ನುರಿತ ಮಹಿಳಾ ವೈದ್ಯರಿಂದ ಸ್ತನ ಆರೋಗ್ಯ, ಗರ್ಭಕಂಠ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಆ ಮೂಲಕ ರೋಗ ಲಕ್ಷಣಗಳನ್ನು ಮೊದಲೇ ಪತ್ತೆ ಹಚ್ಚಿ, ಅದಕ್ಕೆ ಚಿಕಿತ್ಸೆಗೆ ನೆರವಾಗುವಂತ ಕೆಲಸ ಮಾಡಲಾಗುತ್ತಿದೆ.
ಈ ಶಿಬಿರದಲ್ಲಿ ಯಾರೆಲ್ಲ ಭಾಗಿ?
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದಂತ ಫಯಾಜ್ ಅಹ್ಮದ್, ಉಪಾಧ್ಯಕ್ಷೆ ಗಂಗಮ್ಮ, ಉಳವಿಯ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ ಗಣಪತಿ, ಉಪಾಧ್ಯಕ್ಷರಾದಂತ ತನ್ವೀರ್ ಅಹ್ಮದ್ ಸೇರಿದಂತೆ ಎಲ್ಲಾ ಉಳವಿ, ದೂಗೂರು ಗ್ರಾಮ ಪಂಚಾಯ್ತಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಜನವರಿ.19ರಂದು ಸೊರಬ ತಾಲ್ಲೂಕಿನ ಉಳವಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿರುವಂತ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು, ಸಾರ್ವಜನಿಕರು ಭಾಗಿಯಾಗಿ, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಆರೋಗ್ಯ ಶಿಬಿರದ ಸಂಚಾಲಕ ಶಿವಕುಮಾರ ಈ ಉಳವಿ ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರೆಗೆರೆ…., ಸಂಪಾದಕರು…

BBK12: ಬಿಗ್ಬಾಸ್ ಕನ್ನಡ-12 ಗೆಲ್ಲಲಿರುವ ಸ್ಪರ್ಧಿಗೆ ಬಂದಿವೆ 37 ಕೋಟಿ ವೋಟ್!
ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದ ನಂತ್ರ 1.53 ಲಕ್ಷ ಕೋಟಿ ಹೊಸ ಹೂಡಿಕೆ ಆಕರ್ಷಣೆ: ಸಚಿವ ಎಂ ಬಿ ಪಾಟೀಲ








