ನವದೆಹಲಿ: ಹಬ್ಬದ ಋತುವು ಆನ್ ಲೈನ್ ವಂಚಕರ ಋತುವೂ ಆಗಿದೆ. ಆನ್ ಲೈನ್ ಶಾಪಿಂಗ್ ಮಾಡುವಾಗ ನಿಮಗೆ ಹಣ ಸೇರಿದಂತೆ ಉಡುಗೊರೆಗಳು ಮತ್ತು ಬಹುಮಾನಗಳನ್ನು ನೀಡುವ ಭರವಸೆ ನೀಡಲಾಗಿದೆಯೇ? ಅವರ ಮೇಲೆ ಬೀಳಬೇಡಿ. ಉಚಿತ ಉಡುಗೋರೆಯ ಬಗ್ಗೆ ಗಮನ ವಹಿಸಿದ್ರೇ ಏನ್ ಆಗಲಿದೆ ಎಂಬ ಬಗ್ಗೆ ಎಚ್ಚರಿಕೆಯ ಸಂದೇಶವನ್ನು CERT-In ನೀಡಿದೆ. ಆ ಬಗ್ಗೆ ಮುಂದೆ ಸುದ್ದಿ ಓದಿ.
ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (Indian Computer Emergency Response Team – CERT-In) ಹಬ್ಬದ ಕೊಡುಗೆಗಳನ್ನು ( gifts and prizes ) ಪಡೆಯುವ ನಕಲಿ ಸಂದೇಶಗಳ ಮೂಲಕ ಬಳಕೆದಾರರನ್ನು ಗುರಿಯಾಗಿಸಲಾಗುತ್ತಿದೆ ಎಂದು ಎಚ್ಚರಿಸಿದೆ. ಇದು ಬ್ಯಾಂಕ್ ಖಾತೆ ವಿವರಗಳು, ಪಾಸ್ವರ್ಡ್ಗಳು ಮತ್ತು ಒಟಿಪಿಗಳಂತಹ ಸೂಕ್ಷ್ಮ ವಿವರಗಳನ್ನು ಕದಿಯುವ ಚೀನೀ ವೆಬ್ಸೈಟ್ಗಳಿಗೆ ( Chinese websites ) ಬಳಕೆದಾರರನ್ನು ಕರೆದೊಯ್ಯುತ್ತದೆ ಎಂದು ಹೇಳಿದೆ.
“ವಿವಿಧ ಸಾಮಾಜಿಕ ಮಾಧ್ಯಮ ( social media ) ಪ್ಲಾಟ್ಫಾರ್ಮ್ಗಳಲ್ಲಿ (ವಾಟ್ಸಾಪ್, ಟೆಲಿಗ್ರಾಮ್, ಇನ್ಸ್ಟಾಗ್ರಾಮ್ ಇತ್ಯಾದಿ) ನಕಲಿ ಸಂದೇಶಗಳು ಚಲಾವಣೆಯಲ್ಲಿವೆ. ಇದು ಉಡುಗೊರೆ ಲಿಂಕ್ಗಳು ಮತ್ತು ಬಹುಮಾನಗಳಿಗೆ ಬಳಕೆದಾರರನ್ನು ಆಕರ್ಷಿಸುವ ಹಬ್ಬದ ಪ್ರಸ್ತಾಪವನ್ನು ಸುಳ್ಳು ಎಂದು ಹೇಳಿಕೊಳ್ಳುತ್ತದೆ” ಎಂದು ಸಿಇಆರ್ಟಿ-ಇನ್ ತಿಳಿಸಿದೆ.
“ಬೆದರಿಕೆಗಳನ್ನು ಕೂಡ ಆನ್ ಲೈನ್ ವಂಚಕರು ಹಾಕುತ್ತಾರೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರನ್ನು ಅವು ಗುರಿಯಾಗಿಸಿಕೊಳ್ಳಲಾಗಿದೆ. ವಾಟ್ಸಾಪ್ / ಟೆಲಿಗ್ರಾಮ್ / ಇನ್ಸ್ಟಾಗ್ರಾಮ್ ಖಾತೆಗಳ ( (WhatsApp, Telegram, Instagram ) ಮೂಲಕ ಗೆಳೆಯರ ನಡುವೆ ಲಿಂಕ್ಗಳನ್ನು ಹಂಚಿಕೊಳ್ಳಲು ಕೇಳುತ್ತಾರೆ. ಆ ಬಗ್ಗೆ ಅಚ್ಚರಿಕೆಯಿಂದ ಇರುವಂತೆ ಎಚ್ಚರಿಸಿದೆ.
ಅಂದಹಾಗೇ ಸಿಇಆರ್ಟಿ-ಇನ್ ಪ್ರಕಾರ, ಈ ಆನ್ ಲೈನ್ ವಂಚನೆಯು ಥೇಟ್ ಅಸಲಿ ವೆಬ್ ಸೈಟ್ ಗಳಂತೆ ನಕಲಿ ವೆಬ್ ಸೈಟ್ ಮೂಲಕ ಉಡುಗೋರೆಯ ಲಿಂಕ್ ಗಳನ್ನು ಶೇರ್ ಮಾಡಲಾಗುತ್ತದೆ. ಕ್ಲಿಕ್ ಮಾಡಿ, ಈ ಬಹುಮಾನ, ಹಣ ಗೆಲ್ಲಿ ಎಂಬುದಾಗಿ ಲಿಂಕ್ ನೀಡಲಾಗುತ್ತದೆ. ಈ ಲಿಂಕ್ ಗಳನ್ನು ಕ್ಲಿಕ್ ಮಾಡಿದ್ರೇ ಚೀನಿ ಡೊಮೈನ್ ಗಳಿಗೆ ಲಿಂಕ್ ಆಗುತ್ತದೆ. ಆ ಮೂಲಕ ನಿಮ್ಮ ಗುಪ್ತ ಮಾಹಿತಿ ಪಡೆದು, ವಂಚನೆ ನಡೆಯುತ್ತರೆ. ಈ ಬಗ್ಗೆ ಹುಷಾರಾಗಿರಿ ಎಂಬುದಾಗಿ ರಾಷ್ಟ್ರೀಯ ಸೈಬರ್ ಭದ್ರತಾ ಸಂಸ್ಥೆ ತಿಳಿಸಿದೆ.