Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಜೂನ್.20ರಂದು ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಿಗದಿ |Karnataka Cabinet Meeting

ಕೇರಳದಲ್ಲಿ ಮಹಿಳೆಯರ ಜೊತೆಗೆ ತೃತೀಯಲಿಂಗಿಗಳಿಗೂ ಉಚಿತ ಬಸ್‌ ಪ್ರಯಾಣ : ‘ಪ್ರಿಯದರ್ಶಿನಿ ಯೋಜನೆಗೆ ಸಿಎಂ ಚಾಲನೆ!

BREAKING : ಖ್ಯಾತ ಪತ್ರಕರ್ತ ಪಿ.ಲಂಕೇಶ್ ಪತ್ನಿ `ಇಂದಿರಾ ಲಂಕೇಶ್’ ನಿಧನ | Indira Lankesh passes away

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇರಳದಲ್ಲಿ ಮಹಿಳೆಯರ ಜೊತೆಗೆ ತೃತೀಯಲಿಂಗಿಗಳಿಗೂ ಉಚಿತ ಬಸ್‌ ಪ್ರಯಾಣ : ‘ಪ್ರಿಯದರ್ಶಿನಿ ಯೋಜನೆಗೆ ಸಿಎಂ ಚಾಲನೆ!
INDIA

ಕೇರಳದಲ್ಲಿ ಮಹಿಳೆಯರ ಜೊತೆಗೆ ತೃತೀಯಲಿಂಗಿಗಳಿಗೂ ಉಚಿತ ಬಸ್‌ ಪ್ರಯಾಣ : ‘ಪ್ರಿಯದರ್ಶಿನಿ ಯೋಜನೆಗೆ ಸಿಎಂ ಚಾಲನೆ!

By ಸುರೇಶ್‌

ಕೇರಳ : ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ ಬಸ್‌ ಪ್ರಯಾಣದ ಅವಕಾಶ ಕಲ್ಪಿಸುವ ‘ಪ್ರಿಯದರ್ಶಿನಿ’ ಯೋಜನೆಗೆ ಕೇರಳ ಸರ್ಕಾರ ಚಾಲನೆ ನೀಡಿದೆ. ಮುಖ್ಯಮಂತ್ರಿ ವಿ.ಡಿ.ಸತೀಶನ್ ತಿರುವನಂತಪುರಂನ ತಂಪನೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ಯೋಜನೆಯನ್ನು ಉದ್ಘಾಟಿಸಿದರು.

ಯೋಜನೆಯ ಉದ್ಘಾಟನಾ ಪ್ರಯಾಣದಲ್ಲಿ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ವಿಶೇಷವೆಂದರೆ, ಈ ಬಸ್ ಅನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು.ಈ ಯೋಜನೆಯಡಿ ಮಹಿಳೆಯರು ಮತ್ತು ತೃತೀಯಲಿಂಗಿಗಳು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಡೆಸುವ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ರಾಜ್ಯದಾದ್ಯಂತ ಸುಮಾರು 3,125 ಸಾಮಾನ್ಯ ಬಸ್‌ಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿವೆ.

ಯೋಜನೆಯಿಂದ KSRTCಗೆ ಆಗುವ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಖಾಸಗಿ ಬಸ್‌ಗಳಿಗೂ ಯಾವುದೇ ತೊಂದರೆ ಆಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆರಂಭಿಕ ಹಂತದಲ್ಲಿ ಮೊದಲ 100 ದಿನಗಳ ಕಾಲ ಮಹಿಳೆಯರು ಮತ್ತು ತೃತೀಯಲಿಂಗಿಗಳು ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಬಳಿಕ ಯೋಜನೆಯ ಪರಿಣಾಮವನ್ನು ಪರಿಶೀಲಿಸಿ ಫಾಸ್ಟ್ ಮತ್ತು ಸೂಪರ್ ಫಾಸ್ಟ್ ಬಸ್‌ಗಳಿಗೂ ಸೌಲಭ್ಯ ವಿಸ್ತರಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.

ಸಾಮಾನ್ಯ, ಸಿಟಿ ಆರ್ಡಿನರಿ, ಲಿಮಿಟೆಡ್ ಸ್ಟಾಪ್, ಟೌನ್ ಟು ಟೌನ್, ಪಾಯಿಂಟ್ ಟು ಪಾಯಿಂಟ್ ಹಾಗೂ ಗ್ರಾಮವಂಡಿ ಸೇರಿದಂತೆ ಏಳು ವಿಭಾಗದ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದೆ. ಪ್ರಯಾಣಿಕರಿಗೆ ಗುರುತಿಸಲು ಅರ್ಹ ಬಸ್‌ಗಳ ಮೇಲೆ ವಿಶೇಷ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗಿದೆ. ಈ ಯೋಜನೆ ಮಹಿಳೆಯರ ಸಬಲೀಕರಣದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿ ಸತೀಶನ್ ಹೇಳಿದ್ದಾರೆ. ಇದು ಮಹಿಳೆಯರಿಗೆ ನೀಡುತ್ತಿರುವ ದಾನವಲ್ಲ. ಅವರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಯೋಜನೆ ಎಂದು ಅವರು ತಿಳಿಸಿದ್ದಾರೆ.

“I do not see this a charity to the women but believe that this scheme will bring socio-economic benefits to the society.”

– Kerala CM VD Satheesan during inauguration function of 'Priyadarshini' a free bus travel scheme for women pic.twitter.com/A7T7Gk5CUa

— News Arena India (@NewsArenaIndia) June 15, 2026

Share. Facebook Twitter LinkedIn WhatsApp Email

Related Posts

BREAKING : ಪಾಕಿಸ್ತಾನದಲ್ಲಿ ವಾಯು ಸೇನೆಯ ತರಬೇತಿ ವಿಮಾನ ಪತನ : ಇಬ್ಬರು ಪೈಲಟ್ ಸಜೀವ ದಹನ | Video Viral

2 Mins Read

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮುಂದಿನ ತಿಂಗಳು ಬರಲಿದೆ `IRCTC’ ಹೊಸ ವೆಬ್ ಸೈಟ್, ಕ್ಷಣಾರ್ಧದಲ್ಲಿ ಟಿಕೆಟ್ ಬುಕ್.!

2 Mins Read

BREAKING : `NEET UG-2026 ಮರುಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ : ಈ ರೀತಿ ಡೌನ್ಲೋಡ್ ಮಾಡಿಕೊಳ್ಳಿ | NEET UG 2026 Re-Exam Admit Card OUT

1 Min Read
Recent News

BREAKING : ಜೂನ್.20ರಂದು ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಿಗದಿ |Karnataka Cabinet Meeting

ಕೇರಳದಲ್ಲಿ ಮಹಿಳೆಯರ ಜೊತೆಗೆ ತೃತೀಯಲಿಂಗಿಗಳಿಗೂ ಉಚಿತ ಬಸ್‌ ಪ್ರಯಾಣ : ‘ಪ್ರಿಯದರ್ಶಿನಿ ಯೋಜನೆಗೆ ಸಿಎಂ ಚಾಲನೆ!

BREAKING : ಖ್ಯಾತ ಪತ್ರಕರ್ತ ಪಿ.ಲಂಕೇಶ್ ಪತ್ನಿ `ಇಂದಿರಾ ಲಂಕೇಶ್’ ನಿಧನ | Indira Lankesh passes away

Money

ಈ ಯೋಜನೆಯಡಿ ವರ್ಷಕ್ಕೆ ₹1.5 ಲಕ್ಷ ಹೂಡಿಕೆ ಮಾಡಿ, ಮೆಚ್ಯೂರಿಟಿ ಅವಧಿಗೆ ಪಡೆಯಿರಿ ₹70 ಲಕ್ಷಕ್ಕೂ ಅಧಿಕ ರಿಟರ್ನ್ಸ್!

State News
KARNATAKA

BREAKING : ಜೂನ್.20ರಂದು ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ನಿಗದಿ |Karnataka Cabinet Meeting

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ಯಂತ್ರದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದ್ದು, ಪ್ರಸಕ್ತ ವರ್ಷದ ಸಚಿವ ಸಂಪುಟದ 14ನೇ ಸಭೆಯನ್ನು ಕರೆಯಲಾಗಿದೆ.…

BREAKING : ಖ್ಯಾತ ಪತ್ರಕರ್ತ ಪಿ.ಲಂಕೇಶ್ ಪತ್ನಿ `ಇಂದಿರಾ ಲಂಕೇಶ್’ ನಿಧನ | Indira Lankesh passes away

Money

ಈ ಯೋಜನೆಯಡಿ ವರ್ಷಕ್ಕೆ ₹1.5 ಲಕ್ಷ ಹೂಡಿಕೆ ಮಾಡಿ, ಮೆಚ್ಯೂರಿಟಿ ಅವಧಿಗೆ ಪಡೆಯಿರಿ ₹70 ಲಕ್ಷಕ್ಕೂ ಅಧಿಕ ರಿಟರ್ನ್ಸ್!

BREAKING : ಕರ್ನಾಟಕದ ‘ವೋಟರ್ ಐಡಿ’ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆ ಕೊಡುತ್ತೇವೆ : ಸಿಎಂ ಡಿಕೆಶಿ ಸ್ಪಷ್ಟನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.