ಕೆಎನ್ಎನ್ ಡಿಜಿಟಲ್ ಡೆಸ್ಕ್: ವಾಟ್ಸಾಪ್ ಪ್ರಪಂಚದಾದ್ಯಂತ 2 ಶತಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಜನಪ್ರಿಯ ಸಾಮಾಜಿಕ ಮಾಧ್ಯಮವಾಗಿದೆ. ವಾಟ್ಸಾಪ್ ತನ್ನ ಬಳಕೆದಾರರ ಸುರಕ್ಷತೆಗಾಗಿ ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ವಂಚಕರು ಅಮಾಯಕರನ್ನು ವಂಚಿಸುವ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ.
ಇತ್ತೀಚಿನ ಹೊಸದಾಗಿ ವಂಚಕರು ವಾಟ್ಸಾಪ್ ಬಳಕೆದಾರರನ್ನು ವಂಚಿಸಲು ಮುಂದಾಗಿದ್ದಾರೆ. ಹೌದು, ಮೊದಲು ವಾಟ್ಸಾಪ್ ನಲ್ಲಿ ‘’ಹಾಯ್ ಮಮ್’’ ಎಂಬ ಮೆಸೇಜ್ ಹಾಕಿ ಬಳಿಕ ಸಂಪರ್ಕ ಸಾಧಿಸಿಕೊಂಡು ಹಣವನ್ನು ದೋಚುವ ಕೆಲಸ ಮಾಡುತ್ತಿದ್ದಾರೆ.
ಅದರಂತೆ ಆಸ್ಟ್ರೇಲಿಯಾದಲ್ಲಿ ಅನೇಕ ಬಳಕೆದಾರರು 2022 ರಲ್ಲಿ 7 ಮಿಲಿಯನ್ ( 57 ಕೋಟಿ)ಗೊಂತಲೂಹೆಚ್ಚಿನ ಹಣವನ್ನು ಕಳೆದುಕೊಂಡಿದ್ದಾರೆ ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. ಆಸ್ಟ್ರೇಲಿಯನ್ ಗ್ರಾಹಕ ಮತ್ತು ಸ್ಪರ್ಧಾತ್ಮಕ ಆಯೋಗ (ACCC) ಪ್ರಕಾರ ಕಳೆದ ಮೂರು ತಿಂಗಳಲ್ಲಿ ಹಗರಣದ ಬಲಿಪಶುಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆಯಂತೆ.
ಹಾಯ್ ಮಮ್ ಹಗರಣ ಹೇಗೆ ಕೆಲಸ ಮಾಡುತ್ತದೆ?
ವಂಚಕರು ತಮ್ಮ ಫೋನ್ ಕಳೆದು ಹೋಗಿದೆ ಅಥವಾ ಹಾನಿಯಾಗಿದೆ ಎಂದೇಳಿಕೊಂಡು ಸ್ನೇಹಿತರಂತೆ ನಟಿಸುವ ವಂಚಕರು ವಾಟ್ಸಾಪ್ ನಲ್ಲಿ ಸಂದೇಶವನ್ನು ಹಾಕುತ್ತಾರೆ. ಈ ಮೂಲಕ ಬಲಿಪಶುವಿನ ವಿಶ್ವಾಸವನ್ನು ಗಳಿಸಿದ ನಂತರ, ಹೆಚ್ಚಿನ ಸಂದರ್ಭಗಳಲ್ಲಿ ಹಣಕಾಸಿನ ಸಹಾಯದ ಅಗತ್ಯವಿದೆ ಎಂದೇಳಿಕೊಂಡು ಹಣವನ್ನು ದೋಚಲು ಆರಂಭಿಸುತ್ತಾರೆ.
ಸಾಮಧಾನ ವಿಷಯವೆಂದರೆ ಭಾರತದಲ್ಲಿ ಈ ರೀತಿಯ ಹಗರಣಗಳು ವರದಿಯಾಗಿಲ್ಲ. ಆದರೆ ನಮ್ಮ ಎಚ್ಚರಿಕೆಯಿಂದ ಇರಬೇಕು. ಯಾವಾಗಲೂ, ಹಣವನ್ನು ಕಳುಹಿಸುವ ಮೊದಲು ವ್ಯಕ್ತಿಯ ಗುರುತನ್ನು ಎರಡು ಬಾರಿ ಪರಿಶೀಲಿಸಿ.
ಆನ್ಲೈನ್ ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ:
– ನಿಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಅನ್ನು ಖಾಸಗಿಯಾಗಿ ಇರಿಸಿ
– ನೀವು ನಂಬದ ವೆಬ್ಸೈಟ್ಗಳ ನಿಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಳ್ಳಬೇಡಿ
– OTP ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
– ನಿಮ್ಮ ಬ್ಯಾಂಕ್ ಕಾರ್ಡ್ ವಿವರಗಳಾದ PIN ಮತ್ತು CVV ಅನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ
-ವಿಶ್ವಾಸಾರ್ಹ ಮತ್ತು ಸುರಕ್ಷಿತ ವೆಬ್ಸೈಟ್ಗಳಿಂದ ಮಾತ್ರ ಶಾಪಿಂಗ್ ಮಾಡಿ
– ಸುರಕ್ಷಿತ ಬ್ರೌಸರ್ಗಳ ಮೂಲಕ ಇಂಟರ್ನೆಟ್ ಅನ್ನು ಪ್ರವೇಶಿಸಿ
– ನೀವು ಅನುಮಾನಾಸ್ಪದವಾಗಿ ಕಾಣುವ ಅಪರಿಚಿತ ಸಂಖ್ಯೆಗಳಿಂದ ಕರೆಗಳಿಗೆ ಉತ್ತರಿಸಬೇಡಿ
– ಇತ್ತೀಚಿನ ಫರ್ಮ್ವೇರ್ ನವೀಕರಣಗಳೊಂದಿಗೆ ನಿಮ್ಮ ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ನವೀಕೃತವಾಗಿರಿಸಿ
– ವಾಟ್ಸಾಪ್ ನಲ್ಲಿ ಅಪರಿಚಿತ ಸಂಪರ್ಕಗಳು ಹಂಚಿಕೊಂಡ URL ಗಳನ್ನು ಕ್ಲಿಕ್ ಮಾಡಬೇಡಿ
BREAKING NEWS: ನಾಳೆ ಬೆಳಿಗ್ಗೆ 10.30ಕ್ಕೆ ಸುವರ್ಣಸೌಧದಲ್ಲಿ ಮಹಾಪುರಷರ ಪೋಟೋ ಅನಾವರಣ – ಸ್ಪೀಕರ್ ಕಾಗೇರಿ
ಹರಿಯಾಣ ಹೆದ್ದಾರಿಯಲ್ಲಿ ದಟ್ಟ ಮಂಜಿನಿಂದ ಒಂದಕ್ಕೊಂದು ಡಿಕ್ಕಿ ಹೊಡೆದ ವಾಹನಗಳು ; ನಾಲ್ವರಿಗೆ ತೀವ್ರ ಗಾಯ