ಕೇರಳ : ಕೇರಳದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಜಲಾಶಯದ ಹಿನ್ನೀರಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ಘಟನೆ ಕೇರಳದ ತ್ರಿಶೂಲ ಸಮೀಪದ ಜಲಾಶಯದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಹೈದ್ರಾಬಾದ್ ನಲ್ಲಿ 5 ಯುವಕರ ಸಾವು
ಇನ್ನು ಇದೆ ರೀತಿ ಹೈದ್ರಾಬಾದ್ ನಲ್ಲೂ ನಡೆದಿದ್ದು, ತೆಲಂಗಾಣದ ಸಿದ್ದಿಪೇಟೆಯ ಕೊಂಡಪೋಚಮ್ಮ ಸಾಗರ ಅಣೆಕಟ್ಟಿನ ಜಲಾಶಯದಲ್ಲಿ ರೀಲ್ ಚಿತ್ರೀಕರಣ ಮಾಡುವಾಗ ಇಬ್ಬರು ಸಹೋದರರು ಸೇರಿದಂತೆ ಐವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ಮೃತರನ್ನು ಮುಶೀರಾಬಾದ್ ನ ಧನುಷ್ (20), ಆತನ ಸಹೋದರ ಲೋಹಿತ್ (17), ಬನ್ಸಿಲಪೇಟ್ ನ ದಿನೇಶ್ವರ್ (17), ಖೈರತಾಬಾದ್ ನ ಜತಿನ್ (17) ಮತ್ತು ಸಾಹಿಲ್ (19) ಎಂದು ಗುರುತಿಸಲಾಗಿದೆ.