ತ್ರಿಪುರ: ಒಂದೇ ಕುಟುಂಬದ ನಾಲ್ವರು ಹೊಂಡ ಒಂದರಲ್ಲಿ ಶವವಾಗಿ ಪತ್ತೆಯಾಗಿರುವ ಭೀಕರ ಘಟನೆ ತ್ರಿಪುರಾದಲ್ಲಿ ನಡೆದಿದೆ. ಅಲ್ಲದೇ ಈ ಘಟನೆಯ ಹಿಂದೆ ಕೊಲೆಯ ಶಂಕೆ ಕೂಡ ವ್ಯಕ್ತ ವಾಗಿದೆ.
ತ್ರಿಪುರ ರಾಜ್ಯದ ಧಲೈ ಎಂಬಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಮೂವರು ಮಹಿಳೆಯರು, ಓರ್ವ ಪುರುಷನ ಶವ ಹೊಂಡದಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೂ ಕಾರಣವಾಗಿದೆ.
BIGG NEWS : ರಾಜ್ಯದ ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಶೀಘ್ರವೇ `ಡೀಸೆಲ್ ಸಬ್ಸಿಡಿ’ ಖಾತೆಗೆ ಜಮಾ
ಹೊಂಡದಲ್ಲಿ ನಾಲ್ವರ ಶವ ಪತ್ತೆಯ ಹಿನ್ನಲೆಯಲ್ಲಿ, ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೂಡ ನಡೆಸುತ್ತಿದ್ದಾರೆ. ಹೀಗೆ ನಾಲ್ವರು ಹೊಂಡದಲ್ಲಿ ಪತ್ತೆಯ ಹಿಂದೆ ಕೊಲೆಯ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ತ್ರಿಪುರ ಕಮಲಾಪುರದ ಪೊಲೀಸರು, ತನಿಖೆಯನ್ನು ನಡೆಸುತ್ತಿದ್ದಾರೆ.