ಬೀದರ್: ಸ್ವಾತಂತ್ರ್ಯೋತ್ಸವ ಸಂಭ್ರಮದ ನಡುವೆ ಭೀಕರ ಅಪಘಾತವೊಂದು ಜಿಲ್ಲೆಯಲ್ಲಿ ನಡೆದಿದೆ. ಕಂಟೈನರ್ ಒಂದು ಕಾರಿಗೆ ಡಿಕ್ಕಿಯಾದ ಪರಿಣಾಮ, ಕಾರಿನಲ್ಲಿದ್ದಂತ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಬಂಗೂರು ಬಳಿ ನಡೆದಿದೆ.
ಬೀದರ್ ತಾಲೂಕಿನ ಬಂಗೂರು ಬಳಿಯಲ್ಲಿ ಕಂಟೈನರ್ ಒಂದು ಎರಿಟಿಗಾ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ, ಕಾರಿನಲ್ಲಿದ್ದಂತ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಅಂದಹಾಗೇ ಮೃತಪಟ್ಟವರನ್ನು ಹೈದರಾಬಾದ್ ನ ಬೇಗಂಪೇಟೆಯ ನಿವಾಸಿಗಳು ಎಂಬುದಾಗಿ ತಿಳಿದು ಬಂದಿದೆ. ಮೃತ ಪಟ್ಟವರ ವಿವರ ಸೇರಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.