ಬಿಹಾರ : ಸರನ್ ಜಿಲ್ಲೆಯ ಭೂಲ್ಪುರ್ ಗ್ರಾಮದಲ್ಲಿ ಶಂಕಿತ ನಕಲಿ ಮದ್ಯ ಸೇವಿಸಿ ಸುಮಾರು ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಅಸ್ವಸ್ಥಗೊಂಡಿದ್ದಾರೆಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BREAKING NEWS: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಪವನ್ ಕೆ ವರ್ಮಾ ರಾಜೀನಾಮೆ
ನಕಲಿ ಮದ್ಯ ಸೇವಿಸಿದವರ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳ ತಿಳಿಸಿದ್ದಾರೆ. ಮೃತರನ್ನು ಭೂವಾಲ್ಪುರ ಗ್ರಾಮದ ನಿವಾಸಿಗಳಾದ ಕಾಮೇಶ್ವರ್ ಮಹತೋ, ರೋಹಿತ್ ಸಿಂಗ್, ರಾಜೇಂದ್ರ ರಾಮ್ ಎಂದು ಗುರುತಿಸಲಾಗಿದ್ದು, ಅಲ್ಲಾವುದ್ದೀನ್ ಖಾನ್ ನೆರೆಯ ಗರ್ಖಾ ಓಧಾ ಗ್ರಾಮದವರು.
BREAKING NEWS: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಪವನ್ ಕೆ ವರ್ಮಾ ರಾಜೀನಾಮೆ
ಇನ್ನೂ ಕೆಲವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಸದರ್ ಆಸ್ಪತ್ರೆ ಚಪ್ರಾದಲ್ಲಿ ದಾಖಲಿಸಲಾಗಿದೆ ಎಂದು ಮಧೌರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 4 ರಂದು (ಗುರುವಾರ) ಭೇಲ್ಡಿ ಮತ್ತು ಮೇಕರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಗಳಲ್ಲಿ ಹೂಚ್ ಸೇವಿಸಿದ ನಂತರ 13 ಜನರು ಪ್ರಾಣ ಕಳೆದುಕೊಂಡರು ಮತ್ತು 15 ಕ್ಕೂ ಹೆಚ್ಚು ಜನರು ದೃಷ್ಟಿ ಕಳೆದುಕೊಂಡರು.
नीतीश जी नाबोध बिहारी का बली ले रहे हैं। pic.twitter.com/9RrRpwHB88
— Shandilya Giriraj Singh (@girirajsinghbjp) August 12, 2022
ಕೇಂದ್ರ ಸಚಿವ ಮತ್ತು ಬೇಗುಸರಾಯ್ ಸಂಸದ ಗಿರಿರಾಜ್ ಸಿಂಗ್, ನಕಲಿ ಮದ್ಯ ಸೇವನೆಯ ಘಟನೆಯ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
BREAKING NEWS: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಪವನ್ ಕೆ ವರ್ಮಾ ರಾಜೀನಾಮೆ