ಮಣಿಪಾಲ: ʻಉದಯವಾಣಿʼ ಪತ್ರಿಕಾ ಸಮೂಹದ ಸಂಸ್ಥಾಪಕ, ಹಲವು ದಶಕಗಳ ಮಾರ್ಗದರ್ಶಕರೂ ಆಗಿದ್ದ ಮಣಿಪಾಲದ ಪೈ ಕುಟುಂಬದ ಹಿರಿಯರಾದ ತೋನ್ಸೆ ಮೋಹನದಾಸ್ ಪೈ(89) ಭಾನುವಾರ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪೈ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟಿ. ಮೋಹನದಾಸ್ ಪೈ ಅವರು ಸಹೋದರರಾದ ಡಾ ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ, ಸಹೋದರಿಯರಾದ ವಸಂತಿ ಆರ್. ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ ಅವರನ್ನು ಅಗಲಿದ್ದಾರೆ.
ಇಂದು ಬೆಳಗ್ಗೆ 9ರಿಂದ 11 ಗಂಟೆವರೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪಿಕ್ನಿಕ್ಗೆಂದು ಹೋಗಿ ಬಾಲಾಸನ್ ನದಿಯಲ್ಲಿ ಸಿಲುಕಿದ್ದ 11 ವಿದ್ಯಾರ್ಥಿಗಳ ರಕ್ಷಣೆ
Bank Holidays 2022: ಆಗಸ್ಟ್ನಲ್ಲಿ ಬ್ಯಾಂಕ್ಗಳು ʻ18 ದಿನʼ ಬಂದ್: ಇಲ್ಲಿದೆ ರಜಾ ದಿನಗಳ ಪಟ್ಟಿ…