ಮೈಸೂರು: ಇಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ( JDS MLA GT Devegowdha ) ಅವರ ನಿವಾಸಕ್ಕೆ ದಿಢೀರ್ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ( Farmer PM HD Devegowdha ) ಸೇರಿದಂತೆ ಅನೇಕ ಜೆಡಿಎಸ್ ಮುಖಂಡರ ದಂಡೇ ಆಗಮಿಸಿತ್ತು. ಈ ಭೇಟಿಯ ಬಳಿಕ ಜೆಡಿಎಸ್ ಪಕ್ಷದಿಂದ ದೂರವೇ ಉಳಿದು, ಪಕ್ಷವನ್ನು ತೊರೆಯುವ ಹಂತದಲ್ಲಿದ್ದಂತ ಶಾಸಕ ಜಿ.ಟಿ ದೇವೇಗೌಡ ದಿಢೀರ್ ಉಲ್ಟಾ ಹೊಡೆದಿದ್ದಾರೆ. ಅಲ್ಲದೇ ನಾನು ಜೆಡಿಎಸ್ ಬಿಟ್ಟೋಗುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಇಂದು ಮೈಸೂರಿನಲ್ಲಿರುವಂತ ಶಾಸಕ ಜಿ.ಟಿ ದೇವೇಗೌಡ ಅವರ ನಿವಾಸಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ( JDS Leaders ) ಭೇಟಿ ನೀಡಿದರು. ಕೆಲ ಕಾಲ ಶಾಸಕ ಜಿಟಿಡಿ ಜೊತೆಗೆ ಮಾತುಕತೆ ನಡೆಸಿದರು. ಅಲ್ಲದೇ ಪಕ್ಷದಿಂದ ಹೊರ ನಡೆಯುವಂತ ನಿರ್ಧಾರದಲ್ಲಿದ್ದಂತ ಜಿ.ಟಿ ದೇವೇಗೌಡ ಅವರನ್ನು ಮನವೊಲಿಕೆ ಕೂಡ ಮಾಡಲಾಯಿತು.
ಈ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರು, ನನ್ನನ್ನು ಸಿದ್ಧರಾಮಯ್ಯ ಸೇರಿದಂತೆ ಬಿಜೆಪಿ ನಾಯಕರು ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು. ಆದ್ರೇ ನಾನು ಆ ನಿರ್ಧಾರವನ್ನು ಕೈಗೊಂಡಿಲ್ಲ. ಈ ಬಗ್ಗೆ ಸಿದ್ಧರಾಮಯ್ಯ ಹಾಗೂ ಬಿಜೆಪಿ ಪಕ್ಷದ ನಾಯಕರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂಬುದಾಗಿ ಹೇಳಿದರು.
ಇನ್ನೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಮಾತುಕಳನ್ನು ನನೆದು ಕಣ್ಣೀರಿಟ್ಟಂತ ಅವರು, ನಾನು ಮೂರು ವರ್ಷ ದೂರ ಇದ್ದಾಗಲೂ ತಪ್ಪಾಗಿ ಅರ್ಥೈಸಲಿಲ್ಲ. ಜಿಟಿಡಿ ನಮ್ಮ ಹೆಸರು ಉಳಿಸುತ್ತಾನೆ ಎಂದು ನಂಬಿದ್ದೇನೆ ಎಂಬ ನಿಲುವು ತಳೆದಿದ್ದರು. ರಾಜ್ಯದಲ್ಲಿ ನೀರಾವರಿ ಅಭಿವೃದ್ಧಿಗೊಳಿಸಿದ್ದು ದೇವೇಗೌಡರು, ಅವರನ್ನು ಎಲ್ಲಾ ರಾಜ್ಯದ ಜನರು ಇಷ್ಟ ಪಡುತ್ತಾರೆ. ರೈತರಿಗೋಸ್ಕರ ಕಟ್ಟಿರುವಂತ ಪಕ್ಷ ಜೆಡಿಎಸ್ ಆಗಿದೆ ಎಂದರು.
ದೇವೇಗೌಡ ಅವರ ಆಶಯ ರೈತರ ಸರ್ಕಾರ ನೋಡಬೆಂಬುದಾಗಿದೆ. ರಾಜ್ಯದಲ್ಲಿ ಕುಮಾರಣ್ಣನ ಸರ್ಕಾರ ಬರಬೇಕು. ನಮ್ಮ ಫ್ಯಾಮಿಲಿ ದೇವೇಗೌಡರ ಜೊತೆಗೆ ಇರುತ್ತದೆ. ನಾನು ಪಕ್ಷವನ್ನು ತೆರೆಯುವುದಿಲ್ಲ. ಜೆಡಿಎಸ್ ಪಕ್ಷದಿಂದಲೇ ಬೆಳೆದಿದ್ದೇನೆ. ಜೆಡಿಎಸ್ ಪಕ್ಷವನ್ನು ಕಟ್ಟುವುದೇ ನಮ್ಮ ಗುರಿಯಾಗಿದೆ ಎಂಬುದಾಗಿ ತಿಳಿಸಿದರು.