ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ( Congress Party ) ದೂರವೇ ಉಳಿದಿರುವಂತ ಮಾಜಿ ಸಂಸದ, ಪಕ್ಷದ ಹಿರಿಯ ನಾಯಕ ಕೆ.ಹೆಚ್ ಮುನಿಯಪ್ಪ ( Farmer MP K H Muniyappa ) ಅವರು, ಶೀಘ್ರವೇ ಕೈಗೆ ಗುಡ್ ಬೈ ಹೇಳಿ, ಬಿಜೆಪಿ ( BJP ) ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
BIGG NEWS : ಹೆಸ್ಕಾಂ ಗ್ರಾಹಕರೇ ಗಮನಿಸಿ : ಸೈಬರ್ ವಂಚಕರ ನಕಲಿ ಸಂದೇಶಗಳಿಂದ ಜಾಗೃತರಾಗಲು ಹೆಸ್ಕಾಂ ಮನವಿ
ಇಂದು ನಗರದಲ್ಲಿ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ಅವರನ್ನು ಭೇಟಿಯಾಗಿದ್ದು ತೀವ್ರ ಕುತೂಹಲ ಕೆರಳಿಸಿದೆ. ರಹಸ್ಯವಾಗಿ ಸಚಿವ ಸುಧಾಕರ್ ಭೇಟಿ ಮಾಡಿ, ಕಾಂಗ್ರೆಸ್ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಚರ್ಚೆ ನಡೆಸಿದರು.
ಸಚಿವ ಸುಧಾಕರ್ ಅವರ ಸಧಾಶಿವನಗರದಲ್ಲಿರುವಂತ ನಿವಾಸದಲ್ಲಿ ಇಂದು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದಂತ ಅವರು, ಹೊರ ಬಂದ ನಂತ್ರ, ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಕಾರಿನಲ್ಲಿ ತೆರಳಿದ್ರು.
BIGG BREAKING NEWS: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ10,256 ಹೊಸ ಪ್ರಕರಣಗಳು ಪತ್ತೆ, 68 ಸಾವು
ಅಂದಹಾಗೇ, ಇತ್ತೀಚೆಗೆ ಪಕ್ಷದಲ್ಲಿನ ಬೆಳವಣಿಗೆಗಳಿಂದ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಎಂ.ಸಿ ಸುಧಾಕರ್, ಕೊತ್ತನೂರು ಮಂಜುನಾಥ್ ರನ್ನ ಪಕ್ಷಕ್ಕೆ ಸೇರಿಸಿಕೊಂಡ ಕಾರಣ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ, ಬಿಜೆಪಿ ಸೇರ್ಪಡೆ ಸಂಬಂಧ ಇಂದು ಸಚಿವ ಸುಧಾಕರ್ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.