ಬಾಗಲಕೋಟೆ: ಸೋಷಿಯಲ್ ಮೀಡಿಯಾದಲ್ಲಿ ತಂದೆಯ ಕಾಲಂ ನಲ್ಲಿ ವಿಜಯಾನಂದ ಕಾಶಪ್ಪನವರ್ ಎಂಬುದಾಗಿ ಉಲ್ಲೇಖಿಸಿರುವಂತ ಜನನ ಪ್ರಮಾಣ ಪತ್ರವೊಂದು ವೈರಲ್ ಆಗಿದೆ. ಅಲ್ಲದೇ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆಯನ್ನು ನಟಿ ಪೂಜಾಶ್ರೀ ಎಂಬುವರೊಂದಿಗೆ ಆಗಿದ್ದಾರೆ ಎಂಬುದಾಗಿ ಗುಸುಗುಸು ಸದ್ದು ಹರಿದಾಡುತ್ತಿದೆ. ಆ ಬಗ್ಗೆ ಸ್ವತಹ ಮಾಜಿ ಶಾಸಕರು ಏನ್ ಹೇಳಿದ್ರು ಅಂತ ಮುಂದೆ ಓದಿ..
ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದಂತ ಅವರು, ನನಗೆ ಆ ಸರ್ಟಿಫಿಕೇಷ್ ತಂದು ತೋರಿಸಿದ್ರೇ ಮಾತನಾಡುತ್ತೇನೆ. ನನಗೆ ಯಾವುದೇ ಮಾಹಿತಿ ಇಲ್ಲದೇ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯಿಸೋದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಸಿದ್ಧರಾಮಯ್ಯ ಸಿಎಂ ಬಗ್ಗೆ ಮಾತನಾಡಿದಂತ ಅವರು, ನಮ್ಮ ಕಾಂಗ್ರೆಸ್ ಹೈಕಮಾಂಡ್ ಇದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ಇದ್ದಾರೆ. ಅವರು ತೀರ್ಮಾನ ಮಾಡುತ್ತಾರೆ ಎಂದರು.
ನನ್ನ ಲೆವಲ್ ಗೆ ಮಾತನಾಡೋರು ಇದ್ದರೇ ನಾನು ಮಾತನ್ನಾಡುತ್ತೇನೆ, ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು – DKS
ಯಾರೂ ವೈಯಕ್ತಿಕ ಜೀವನಕ್ಕೆ ಹೋಗಬಾರದು. ರಾಜಕೀಯವೇ ಬೇರೆಯಾಗಿದೆ, ವೈಯಕ್ತಿಕ ಬದುಕೇ ಬೇರೆಯಾಗಿದೆ. ನಾನು ದಾಖಲೆಯಿಲ್ಲದೇ ಯಾವುದೇ ಮಾತನಾಡೋದಿಲ್ಲ. ನನಗೆ ದಾಖಲೆ ಸಿಗಲಿ ಆಗ ಮಾತನಾಡುತ್ತೇನೆ ಎಂಬುದಾಗಿ ತಿಳಿಸಿದರು.