ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ
ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ.=ಆದ್ದರಿಂದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು (6) ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಆದೇಶ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಈ ನಡುವೆ ಮ್ಮ ಪುತ್ರನಿಗೆ ಹಾವೇರಿ ಲೋಕಸಭೆಯಿಂದ ಟಿಕೇಟ್ ಸಿಗದ ಹಿನ್ನಲೆಯಲ್ಲಿ ಬಂಡಾವೆದ್ದು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಚುನಾವಣಾ ಆಯೋಗದಿಂದ ಚಿಹ್ನೆ ನೀಡಲಾಗಿದೆ.
ಕೆ.ಎಸ್.ಈಶ್ವರಪ್ಪಗೆ ಚುನಾವಣಾ ಆಯೊಗ ‘ಕಬ್ಬಿನ ಜೊತೆ ಇರುವ ರೈತ’ನ ಚಿಹ್ನೆಯನ್ನು ನೀಡಿದ್ದು, ಈ ಮೂಲಕ ಅವರು ಮೊದಲ ಬಾರಿಗೆ ತಮ್ಮದೇ ಪಾರ್ಟಿವಿರುದ್ದ ಸಿಡಿದೆದ್ದು ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ.
ತಮ್ಮ ಪಾರ್ಟಿಯ ವಿರುದ್ದವೇ ಕಣಕ್ಕೆ ಇಳಿದಿರುವ ಕೆ.ಎಸ್ ಈಶ್ವಪ್ಪನವರು ಲೋಕಸಭೆಯಲ್ಲಿ ಯಾವ ರೀತಿ ಕಮಲ್ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಶಿವಮೊಗ್ಗ: ತಮ್ಮ ಪುತ್ರನಿಗೆ ಹಾವೇರಿ ಲೋಕಸಭೆಯಿಂದ ಟಿಕೇಟ್ ಸಿಗದ ಹಿನ್ನಲೆಯಲ್ಲಿ ಬಂಡಾವೆದ್ದು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಚುನಾವಣಾ ಆಯೋಗದಿಂದ ಚಿಹ್ನೆ ನೀಡಲಾಗಿದೆ.
ಕೆ.ಎಸ್.ಈಶ್ವರಪ್ಪಗೆ ಚುನಾವಣಾ ಆಯೊಗ ‘ಕಬ್ಬಿನ ಜೊತೆ ಇರುವ ರೈತ’ನ ಚಿಹ್ನೆಯನ್ನು ನೀಡಿದ್ದು, ಈ ಮೂಲಕ ಅವರು ಮೊದಲ ಬಾರಿಗೆ ತಮ್ಮದೇ ಪಾರ್ಟಿವಿರುದ್ದ ಸಿಡಿದೆದ್ದು ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ.ತಮ್ಮ ಪಾರ್ಟಿಯ ವಿರುದ್ದವೇ ಕಣಕ್ಕೆ ಇಳಿದಿರುವ ಕೆ.ಎಸ್ ಈಶ್ವಪ್ಪನವರು ಲೋಕಸಭೆಯಲ್ಲಿ ಯಾವ ರೀತಿ ಕಮಲ್ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.