ಟೋಕಿಯೋ: ಪಶ್ಚಿಮ ಜಪಾನಿನ ನಾರಾ ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಈ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಂತ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೇ ಅವರು ಚಿಕಿತ್ಸೆ ಫಲಕಾರಿಯಾಗದೇ ಇದೀಗ ಸಾವನ್ನಪ್ಪಿರೋದಾಗಿ ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ಹಾಸನ: ಹೇಮಾವತಿ ಜಲಾಶಯ ಭರ್ತಿಗೆ ಕೇವಲ 6.56 ಅಡಿ ಬಾಕಿ, ಯಾವ ಸಂದರ್ಭದಲ್ಲಾದ್ರೂ ನೀರು ಹೊರಕ್ಕೆ, ಜನರಿಗೆ ಎಚ್ಚರಿಕೆ
ಇಂದು ಜಪಾನ್ ನ ಮಾಜಿ ಪ್ರಧಆನಿ ಶಿಂಜೋ ಅಬೆ ಅವರ ಮೇಲೆ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿದ್ದನು. ಹೀಗೆ ದಾಳಿ ನಡೆಸಿದಂತ ಶಂಕಿತ ಶೂಟರ್ 41 ವರ್ಷದ ನಾರಾ ನಿವಾಸಿಯಾಗಿದ್ದು, ಯಮಗಾಮಿ ತೆಟ್ಸುಯಾ ಎಂದು ಹೆಸರಿಸಲಾಗಿದೆ. ಶಂಕಿತ ವ್ಯಕ್ತಿ ಹೊಂದಿದ್ದ ಸ್ಥಳದಲ್ಲಿ ಪೊಲೀಸರು ಬಂದೂಕನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಪಾನ್ನ ಎನ್ಎಚ್ಕೆ ವರ್ಲ್ಡ್ ನ್ಯೂಸ್ ವರದಿ ಮಾಡಿದೆ. ಅಬೆ ಅವರನ್ನು ಹಿಂದಿನಿಂದ ಬಂದೂಕಿನಿಂದ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಂತ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೇ. ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ (67) ಚಿಕಿತ್ಸೆ ಫಲಿಸದೇ ಇದೀಗ ನಿಧನರಾಗಿರೋದಾಗಿ ( Former Japanese Prime Minister Shinzo Abe passes away ) ತಿಳಿದು ಬಂದಿದೆ.
Officials say former Japanese Prime Minister #ShinzoAbe has been confirmed dead. He was reportedly shot during a speech on Friday in the city of Nara, near Kyoto: Japan's NHK WORLD News pic.twitter.com/7ayJpNCw17
— ANI (@ANI) July 8, 2022