ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ-ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿವೆ. ಬಿಜೆಪಿಯಿಂದ ಜನಸಂಕಲ್ಪ ಯಾತ್ರೆ ನಡೆಸಲಾಗುತ್ತಿದ್ದರೇ, ಕಾಂಗ್ರೆಸ್ ನಿಂದ ಬಸ್ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಈ ನಡುವೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ರಿವರ್ಸ್ ಆಪರೇಷನ್ ಶುರುಮಾಡಿದೆ. ಇದರ ಭಾಗವಾಗಿ ನಾಳೆ ಮಾಜಿ ಶಾಸಕ ವಿಎಸ್ ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ರಿವರ್ಸ್ ಆಪರೇಷನ್ ಶುರುವಾಗಿದೆ ಎನ್ನಲಾಗುತ್ತಿದೆ. ಸಚಿವ ಬಿ.ಸಿ ಪಾಟೀಲ್ ವಿರುದ್ಧ ಯು.ಬಿ ಬಣಕಾರ್ ಆಪರೇಷನ್ ಹಸ್ತ ಸಕ್ಸಸ್ ಆಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಶಿವರಾಂ ಹೆಬ್ಬಾರ್ ವಿರುದ್ಧವೂ ರಿವರ್ಸ್ ಆಪರೇಷನ್ ಮಾಡುತ್ತಿದೆ ಎಂದು ತಿಳಿದು ಬಂದಿದೆ.
BIG NEWS: ನಾವು ಅಧಿಕಾರಕ್ಕೆ ಬಂದರೇ 7 ಕೆಜಿ ಅಲ್ಲ 10 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆ- ಸಿದ್ಧರಾಮಯ್ಯ ಘೋಷಣೆ
ಕಾಂಗ್ರೆಸ್ ಪಕ್ಷ ತೊರೆದವರ ವಿರುದ್ಧ ತೊಡೆ ತಟ್ಟಿರುವಂತ ನಾಯಕರು, ಯಲ್ಲಾಪುರದ ಮಾಜಿ ಶಾಸಕ ವಿ ಎಸ್ ಪಾಟೀಲ್ ಅವರನ್ನು ನಾಳೆ ಕೈ ಗೆ ಆಹ್ವಾನಿಸಲಿದ್ದಾರೆ. ಯಲ್ಲಾಪುರದಿಂದ ಒಮ್ಮೆ ಶಾಸಕರಾಗಿರುವಂತ ಅವರು, ಕ್ಷೇತ್ರದಲ್ಲಿ ಸಾಕಷ್ಟು ಹಿಡಿತವನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಇವರು ನಾಳೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ.