ಯಾದಗಿರಿ : ಇತ್ತೀಚಿಗೆ ಕಾಂಗ್ರೆಸ್ಸಿನ ರಾಜಾ ವೆಂಕಟಪ್ಪ ನಾಯಕ ಅವರು ನಿಧನರಾದ ಹಿನ್ನೆಲೆಯಲ್ಲಿ, ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದ್ದು ಅಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡ ಸ್ಪರ್ದಿಸಲಿದ್ದಾರೆ. ಹಾಗಾಗಿ ಹಿಂದೆ ಅವರು ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನಲ್ಲಿ ಮತಯಾಚನೆ ಮಾಡಿದರು.
ಹಾಗಾಗಿ ಇಂದು ಅವರು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಮತಯಾಚನೆ ಮಾಡುವ ವೇಳೆ ಮಾತನಾಡಿದ ಅವರು, ನನಗೆ ತಂದೆ ತಾಯಿ ಇಲ್ಲ ಇಲ್ಲಿ ಬಂದಂತಹ ಎಲ್ಲಾ ತಾಯಂದಿರ ಹತ್ತಿರ ನನ್ನ ಕಾರ್ಯಕರ್ತರ ಹತ್ತಿರ ಎಲ್ಲಾ ಅಣ್ಣ-ತಮ್ಮಂದಿರ ಹತ್ತಿರ ಎಲ್ಲ ನನ್ನ ಬಿಜೆಪಿ ಕಾರ್ಯಕರ್ತರು ನಿಮಗೆ ಕೈ ಮುಗಿದು ನಿಮ್ಮ ಕಾಲಿಗೆ ನಮಸ್ಕಾರ ಮಾಡಿ ಕೇಳುತ್ತೇನೆ ನಮಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಹಾಕಿದರು.