ಸಂಗಮ ಸ್ಥಳವಾದ ‘ಸಂಗಮ್’ ಬಳಿ ದೋಣಿಯಲ್ಲಿ ‘ಹುಕ್ಕಾ, ನಾನ್ವೆಜ್ ಪಾರ್ಟಿ’ ನಡೆಸುತ್ತಿದ್ದ ವಿಡಿಯೋವೊಂದು ವೈರಲ್ ಆಗಿದ್ದು, ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ ಕೋಳಿ ಬೇಯಿಸುವುದನ್ನು ವೀಡಿಯೊ ತೋರಿಸುತ್ತದೆ. ದೋಣಿಯಲ್ಲಿದ್ದ 8 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ನಗರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರೋಪಿಗಳ ಮೇಲೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಹಾಗೂ ಪೂಜಾ ಸ್ಥಳವನ್ನು ಅಪವಿತ್ರಗೊಳಿಸಿದ ಆರೋಪ ಹೊರಿಸಲಾಗಿದೆ.
ಮೂರು ದಿನಗಳ ಹಿಂದೆ ವೈರಲ್ ಆಗಿರುವ 30 ಸೆಕೆಂಡ್ಗಳ ವಿಡಿಯೋದಲ್ಲಿ ಬಿಳಿ ಅಂಗಿ ಧರಿಸಿದ ವ್ಯಕ್ತಿಯೊಬ್ಬ ದೋಣಿಯಲ್ಲಿ ಹುಕ್ಕಾ ಸೇದುತ್ತಿರುವುದನ್ನು ನೋಡಬಹುದು. ನಂತರ, ದೋಣಿಯಲ್ಲಿ ಕೋಳಿ ಮಾಂಸ ಬೇಯಿಸುತ್ತಿರುವುದನ್ನು ನೋಡಬಹುದು.
In UP’s Prayagraj, a video of couple of men smoking Hookah and roasting chicken while picnicking on a boat has surfaced. A police probe is underway to ascertain the identity of people seen in the video. pic.twitter.com/Ev83MAiAEj
— Piyush Rai (@Benarasiyaa) August 31, 2022
SHOCKING NEWS: ಗಂಟೆಗಟ್ಟಲೆ ಕಾದು ಕುಂತರೂ ಬಾರದ ವೈದ್ಯರು: ಹೆತ್ತವ್ವನ ಮಡಿಲಲ್ಲೇ ಕೊನೆಯುಸಿರೆಳೆದ ಬಾಲಕ