Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ಖರೀದಿಸುವ ಹಾಲು `ಕಲಬೆರಕೆ’ ಆಗಿದೆಯಾ? ಜಸ್ಟ್ ಹೀಗೆ ಟೆಸ್ಟ್ ಮಾಡಿ.!

31/01/2026 12:56 PM

SHOCKING : ರಾಜ್ಯದಲ್ಲಿ ಪ್ರತ್ಯೇಕ ಘಟನೆ : ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ, ಮಹಿಳೆ ಸಾವು!

31/01/2026 12:46 PM

ವಿಶ್ವದಲ್ಲೇ ಅತಿಹೆಚ್ಚು ಸಾಲ ಹೊಂದಿರುವ ದೇಶ ಯಾವುದು ಗೊತ್ತಾ? ಭಾರತಕ್ಕೆ ಎಷ್ಟನೇ ಸ್ಥಾನ?

31/01/2026 12:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸ್ವಾಸ್ಥ್ಯಯುತ ಜೀವನಕ್ಕೆ, ಹೀಗಿರಬೇಕು ನಿಮ್ಮ ಆಹಾರ ಕ್ರಮ
LIFE STYLE

ಸ್ವಾಸ್ಥ್ಯಯುತ ಜೀವನಕ್ಕೆ, ಹೀಗಿರಬೇಕು ನಿಮ್ಮ ಆಹಾರ ಕ್ರಮ

By kannadanewsnow0929/10/2024 10:07 AM

“ಆಹಾರೋಹಿ ದೇಹ ಸಂಭವ” ಅಂದರೆ ನಾವು ಯಾವ ಆಹಾರ ಸೇವಿಸುತ್ತೇವೆಯೋ ಅಂತೆಯೇ ನಮ್ಮ ದೇಹದ ರಚನೆ ಆಗುತ್ತದೆ.ನಾವು ಆಧುನಿಕತೆಗೆ ಹೊಂದಿಕೊಳ್ಳುತ್ತಾ ನಮ್ಮ ಜೀವನ ಶೈಲಿ,ಆಹಾರ ಮತ್ತು ಆಹಾರ ಕ್ರಮಗಳನ್ನು ಆಧುನಿಕತೆಗೆ ತಕ್ಕಂತೆ ಬದಲಾಯಿಸಿಕೊಂಡಿದ್ದೇವೆ.

ಆಯುರ್ವೇದವು ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಇವುಗಳನ್ನು ಮಾನವ ಜೀವನದ ಮೂರು ಸ್ತಂಭಗಳು ಎಂದು ವಿವರಿಸಿದೆ. ಹೇಗೆ ವಾಹನ ಚಲಿಸಲು ಇಂಧನ ಮುಖ್ಯವೋ, ಹಾಗೆಯೇ ಮಾನವನ ದೇಹದ ಚಟುವಟಿಕೆಗೆ ಮತ್ತು ಬೆಳವಣಿಗೆಗೆ ಆಹಾರವು ಅತ್ಯಗತ್ಯ. ಹೀಗಿರುವಾಗ ಆಹಾರದ ರುಚಿಗೆ ಮತ್ತು ಆಕರ್ಷಣೆಗೆ ಮೊರೆಹೋಗಿ ಅನೇಕ ರೋಗಗಳಿಗೆ ತುತ್ತಾಗಿದ್ದೇವೆ. ಹಾಗಾದರೆ ನಾವು ಎಂತಹ ಆಹಾರವನ್ನು ಸೇವಿಸಬೇಕು? ಎಷ್ಟು ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕು? ಆಹಾರದ ಕ್ರಮವೇನು ಎಂಬ ಹಲವು ಪ್ರಶ್ನೆಗಳಿಗೆ ಆಯುರ್ವೇದದಲ್ಲಿ ಹೀಗಿದೆ ವಿವರಣೆ.

ಎಂತಹ ಆಹಾರವನ್ನು ಸೇವಿಸಬೇಕು?

ಆಯುರ್ವೇದವು ಆರು ರಸ(taste)ಗಳನ್ನು ತಿಳಿಸಿದೆ ಅವುಗಳೆಂದರೆ ಮಧುರ ರಸ(ಸಿಹಿ), ಆಮ್ಲರಸ(ಹುಳಿ), ಲವಣರಸ(ಉಪ್ಪು),ತಿಕ್ತರಸ(ಕಹಿ), ಕಟುರಸ (ಖಾರ), ಕಷಾಯ ರಸ(ಒಗರು) ನಿಯಮಿತವಾಗಿ ಆರು ರಸಗಳಿಂದ ಕೂಡಿದ ಆಹಾರವನ್ನು ಸೇವಿಸುವುದರಿಂದ ದೇಹವು ಬಲದಾಯಕವಾಗುತ್ತದೆ.ಮತ್ತು ನಿಯಮಿತವಾಗಿ ಒಂದೇ ರಸ(ರುಚಿ) ಸೇವನೆಯಿಂದ ಶರೀರವು ದುರ್ಬಲವಾಗುತ್ತದೆ. ನಮ್ಮ ಶರೀರವು ರಸ, ರಕ್ತಾದಿ ಮುಂತಾದ ಸಪ್ತಧಾತುಗಳಿಂದ(body tissues)ಕೂಡಿ ಯಾವಾಗಲೂ ಪರಿಪಾಕ( digestion &metabolism)ಹೊಂದುತ್ತಾ, ಗುರು-ಲಘು,ಶೀತ-ಉಷ್ಣ ಮುಂತಾದ ಹತ್ತು ದ್ವಂದ್ವಗಳನ್ನು ಗುಣಗಳಿಂದ ಕೂಡಿರುತ್ತದೆ. ಆಹಾರ ಪದಾರ್ಥವು ಕೂಡ ಈ 10 ದ್ವಂದ್ವ ಗುಣಗಳಿಂದ ಕೂಡಿರುತ್ತದೆ ಆದ್ದರಿಂದ ದೇಹದ ಸಪ್ತಧಾತುಗಳು ತಮಗೆ ಸಮಾನವಾದ ಆಹಾರ ಪದಾರ್ಥಗಳ ಗುಣಗಳಿಂದ ವೃದ್ಧಿ ಹೊಂದುತ್ತವೆ ಮತ್ತು ವಿರುದ್ಧ ಗುಣವುಳ್ಳ ಪದಾರ್ಥಗಳಿಂದ ಕ್ಷೀಣಿಸುತ್ತವೆ. ಹೀಗಾಗಿ ನಾವು ಆಹಾರದ ಗುಣ ಧರ್ಮವನ್ನು ತಿಳಿದು ಆಹಾರವನ್ನು ಸೇವಿಸುವುದು ಉತ್ತಮ.

ಆಹಾರದ ಪ್ರಮಾಣ ಎಷ್ಟಿರಬೇಕು?

“ಆಯುಷ್ಯಂ ಭೋಜನಂ ಜೀರ್ಣ “ಮೊದಲು ಸೇವಿಸಿದ ಆಹಾರ ಸಂಪೂರ್ಣವಾಗಿ ಜೀರ್ಣವಾದ ನಂತರವೇ ಮುಂದಿನ ಆಹಾರವನ್ನು ಸೇವಿಸಬೇಕು. ಆಹಾರ ಪ್ರಮಾಣವೂ ಸೇವಿಸುವವರ ಅಗ್ನಿಯ ಮೇಲೆ ಅವಲಂಬಿತವಾಗಿರುತ್ತದೆ,ಜೀರ್ಣಶಕ್ತಿಯು ಎಲ್ಲರಲ್ಲೂ ಸಮನಾಗಿರದೆ ವಿಭಿನ್ನವಾಗಿರುತ್ತದೆ.

ಅಗ್ನಿಯ(Digestive fire) ಪ್ರಾಮುಖ್ಯತೆ

ರೋಗ ಸರ್ವೇ ಅಪಿ ಮುಂದಾಗ್ನೋ, ಅಗ್ನಿ(Digestive fire) ಎಂದರೆ ಆಹಾರ ಪದಾರ್ಥಗಳನ್ನು ಜೀರ್ಣ ಮಾಡಲು ಒಂದು ಸಹಾಯಕ ಘಟಕವಾಗಿದೆ. ಜಾಠರಾಗ್ನಿ ಯ ದುರ್ಬಲದಿಂದ ಸೇವಿಸಿದ ಆಹಾರವು ಪರಿಪೂರ್ಣವಾಗಿ ಪಚನವಾಗದೆ ಆಹಾರ ರಸವು ಉತ್ಪತ್ತಿಯಾಗುತ್ತದೆ. ಈ ಅಪಕ್ವವಾದ ಆಹಾರ ರಸವನ್ನು ‘ಆಮಾ’ ಎಂದು ಕರೆಯುತ್ತಾರೆ.ಈ ಆಮಾವು ತ್ರಿದೋಷಗಳಾದ ವಾತ,ಪಿತ್ತ ಮತ್ತು ಕಫ ದೋಷಗಳನ್ನು ಪ್ರಕೋಪಗಳಿಸಿ ರೋಗಗಳ ಉದ್ಭವಕ್ಕೆ ಕಾರಣವಾಗುತ್ತದೆ.

ಆಹಾರ ಸೇವಿಸಿದ ನಂತರ ಏನು ಮಾಡಬಾರದು?

ಊಟವಾದ ಮೇಲೆ ಕುಳಿತುಕೊಳ್ಳುವನು ಸೋಮಾರಿ, ಮಲಗುವ ಪುಷ್ಟನಾಗುವನು, ಸಂಚರಿಸುವವನು ದೀರ್ಘಾಯುಷ್ಯವಂತನಾಗುವನು ಮತ್ತು ಓಡುವವನ ಹಿಂದೆಯೇ ಮೃತ್ಯು ಓಡಿ ಬರುತ್ತದೆ (ಊಟವಾದ ಬಳಿಕ ಸ್ವಲ್ಪ ಸಂಚರಿಸಬಹುದು ಆದರೆ ಓಡಬಾರದು ಮತ್ತು ವ್ಯಾಯಾಮವನ್ನು ಮಾಡುವುದು ನಿಷಿದ್ಧ. ಊಟವಾದ 48 ನಿಮಿಷದ ಕಾಲದವರೆಗೆ ಇವುಗಳನ್ನು ಬಿಡಬೇಕು).

ಆಹಾರ ಸೇವಿಸುವ ನಿಯಮಗಳು

1.ಉಷ್ಣ ಭುಂಜೀತ – ಆಹಾರವು ಬಿಸಿಯಾಗಿರುವಾಗಲೇ ಸೇವಿಸಬೇಕು. ಆಹಾರವು ಬಿಸಿಯಾಗಿದ್ದಾಗ ಜೈವಿಕ ಪೋಷಕಾಂಶಗಳ ಲಭ್ಯತೆ ಸಮರ್ಪಕವಾಗಿರುತ್ತದೆ.
2.ಸ್ನಿಗ್ಧಂ ಭುಂಜೀತ – ಆಹಾರದಲ್ಲಿ ಜಿಡ್ಡಿನಂತಹ ಅಂಶವನ್ನು ಸೇರಿಸಿ ಸೇವಿಸಬೇಕು.
3.ಮಾತ್ರಾವತ್ ಭುಂಜೀತ – ಸರಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬೇಕು.
4.ಜೀರ್ಣೇ ಭುಂಜೀತ – ಮೊದಲು ಸೇವಿಸಿದ ಆಹಾರ ಜೀರ್ಣವಾದ ನಂತರವೇ ಮುಂದಿನ ಆಹಾರವನ್ನು ಸೇವಿಸಬೇಕು.
5.ನಾ ಅತಿ ದೃತಂ – ಗಡಿಬಿಡಿಯಲ್ಲಿ, ಮೊಬೈಲ್ ಟಿವಿಯನ್ನು ನೋಡುತ್ತಾ ಆಹಾರವನ್ನು ಸೇವಿಸಬಾರದು.
6.ವಿರುದ್ಧ ಸ್ವಭಾವದ ಆಹಾರವನ್ನು ಸೇವಿಸಬಾರದು.
7.ನಾ ಅತಿ ವಿಲಂಬಿತಮ್- ಅತಿ ನಿಧಾನವಾಗಿ ಆಹಾರವನ್ನು ಸೇವಿಸಬಾರದು.
8.ಊಟ ಮಾಡುವಾಗ ನಗಬಾರದು ಮತ್ತು ಮಾತನಾಡಬಾರದು.

“ಅನ್ನಂ ಬ್ರಹ್ಮಂ” ಎಂದು ತಿಳಿಸಲಾಗಿದೆ. ಇತ್ತೀಚಿನ ಪಾಶ್ಚಿಮಾತ್ಯ ಜೀವನ ಶೈಲಿಯ ಅನುಕರಣೆಯಿಂದ ಸೇವಿಸುವ ಆಹಾರದ ರುಚಿಗೆ ಮತ್ತು ಆಕರ್ಷಣೆಗೆ ಮೊರೆಹೊಗಿದ್ದಾರೆಯೇ ಹೊರತು ಅತಂಹ ಆಹಾರಗಳ ಪೋಷಕಾಂಶಗಳ ಬಗ್ಗೆ ಗಮನವಿಲ್ಲ.

ಸರಿಯಾದ ಆಹಾರ ಮತ್ತು ಆಹಾರಕ್ರಮದ ಪಾಲನೆಯಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು. ಆದ್ದರಿಂದ ಮೇಲೆ ತಿಳಿಸಿರುವ ಆಹಾರಕ್ರಮಗಳನ್ನು ಪಾಲನೆ ಮಾಡಿ ಸ್ವಾಸ್ಥ್ಯತೆಯನ್ನು ಕಾಪಾಡಿಕೊಳ್ಳಿ. ಎಲ್ಲರಿಗೂ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಶುಭಾಶಯಗಳು. ಆಯುರ್ವೇದವನ್ನು ಅರಿತು, ಅನುಸರಿಸಿ, ಆರೋಗ್ಯದಿಂದಿರಿ.

ಲೇಖಕರು: ಡಾ. ಪ್ರವೀಣ್ ಕುಮಾರ್, ಆಯುರ್ವೇದ ವೈದ್ಯ, ಹಗರಿಬೊಮ್ಮನಹಳ್ಳಿ, ಮೊಬೈಲ್ ಸಂಖ್ಯೆ -8660885793.

Share. Facebook Twitter LinkedIn WhatsApp Email

Related Posts

ಕ್ಯಾನ್ಸರ್‌ ಆರಂಭಿಕ ಲಕ್ಷಣಗಳೇನು? ಇಲ್ಲಿದೆ ಮಾಹಿತಿ | Symptoms of Cancer

31/01/2026 5:45 AM4 Mins Read

ಚಿಕನ್, ಮಟನ್ ಅಲ್ಲ, ಪ್ರಪಂಚದಲ್ಲೇ ಅತ್ಯಂತ ಶಕ್ತಿಶಾಲಿ ತರಕಾರಿ.! ತಿಂದ್ರೋ ಅದ್ಭುತ!

29/01/2026 2:42 PM2 Mins Read

ಕ್ಯಾನ್ಸರ್’ಗೆ ಯಾವುದೇ ವೆಚ್ಚವಿಲ್ಲದೆ ತಪಾಸಣೆ, ನಿಮ್ಮ ಅಡುಗೆಮನೆಯಲ್ಲೇ ಪವಾಡ ಚಿಕಿತ್ಸೆ! ನಮ್ಮ ಪೂರ್ವಜರ ಸಲಹೆ ಅನುಸರಿಸಿ

29/01/2026 5:33 AM2 Mins Read
Recent News

ನೀವು ಖರೀದಿಸುವ ಹಾಲು `ಕಲಬೆರಕೆ’ ಆಗಿದೆಯಾ? ಜಸ್ಟ್ ಹೀಗೆ ಟೆಸ್ಟ್ ಮಾಡಿ.!

31/01/2026 12:56 PM

SHOCKING : ರಾಜ್ಯದಲ್ಲಿ ಪ್ರತ್ಯೇಕ ಘಟನೆ : ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ, ಮಹಿಳೆ ಸಾವು!

31/01/2026 12:46 PM

ವಿಶ್ವದಲ್ಲೇ ಅತಿಹೆಚ್ಚು ಸಾಲ ಹೊಂದಿರುವ ದೇಶ ಯಾವುದು ಗೊತ್ತಾ? ಭಾರತಕ್ಕೆ ಎಷ್ಟನೇ ಸ್ಥಾನ?

31/01/2026 12:45 PM

ಕಸಿ ಮಾಡುವ ಮೊದಲು ಶ್ವಾಸಕೋಶವಿಲ್ಲದೆ 48 ಗಂಟೆಗಳ ಕಾಲ ಪವಾಡಸದೃಶವಾಗಿ ಬದುಕಿದ ವ್ಯಕ್ತಿ !

31/01/2026 12:41 PM
State News
KARNATAKA

ನೀವು ಖರೀದಿಸುವ ಹಾಲು `ಕಲಬೆರಕೆ’ ಆಗಿದೆಯಾ? ಜಸ್ಟ್ ಹೀಗೆ ಟೆಸ್ಟ್ ಮಾಡಿ.!

By kannadanewsnow5731/01/2026 12:56 PM KARNATAKA 2 Mins Read

ಆಹಾರ ಕಲಬೆರಕೆಯು ಸಾರ್ವಜನಿಕ ಆರೋಗ್ಯಕ್ಕೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ ಮತ್ತು ಕಲಬೆರಕೆ ಅಭ್ಯಾಸಗಳನ್ನು ನಾವು ಆಗಾಗ್ಗೆ ಕೇಳುತ್ತೇವೆ, ಇದು ಜಾಗರೂಕತೆ ಮತ್ತು…

SHOCKING : ರಾಜ್ಯದಲ್ಲಿ ಪ್ರತ್ಯೇಕ ಘಟನೆ : ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ, ಮಹಿಳೆ ಸಾವು!

31/01/2026 12:46 PM

ಶೀತ, ಕೆಮ್ಮು ಸೇರಿ ಈ ಎಲ್ಲಾ ರೋಗಗಳಿಗೆ ರಾಮಬಾಣ ‘ಜಿಂದಾ ತಿಲಿಸ್ಮತ್’ : ಅದ್ಭುತ ಔಷಧದ ಪ್ರಯೋಜನಗಳ ಬಗ್ಗೆ ತಿಳಿಯಿರಿ.!

31/01/2026 12:38 PM

ಗಮನಿಸಿ : ‘ಮಧುಮೇಹ’ ಗುಣಪಡಿಸುವ ಅದ್ಭುತ ಬೀಜಗಳಿವು : ಸಿಕ್ಕರೆ ಬಿಡ್ಲೇಬೇಡಿ.!

31/01/2026 12:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.