ನವದೆಹಲಿ : ಲಿಯೋನೆಲ್ ಮೆಸ್ಸಿ ಅವರ ಬಹುನಿರೀಕ್ಷಿತ ಭಾರತ ಪ್ರವಾಸಕ್ಕಾಗಿ ನಿರೀಕ್ಷೆ ಹೆಚ್ಚುತ್ತಿರುವಂತೆಯೇ, ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದಂದು ವಿಶೇಷ ಉಡುಗೊರೆಯನ್ನ ಕಳುಹಿಸಿದ್ದಾರೆ. ಅದೇನೆಂದ್ರೆ, ಅರ್ಜೆಂಟೀನಾದ 2022ರ FIFA ವಿಶ್ವಕಪ್ ಅಭಿಯಾನದ ಸಹಿ ಮಾಡಿದ ಜೆರ್ಸಿ.
ಗೌರವದ ಸಂಕೇತ.!
ಮೆಸ್ಸಿಯ ಭಾರತ ಭೇಟಿಯ ನೇತೃತ್ವ ವಹಿಸಿರುವ ಪ್ರವರ್ತಕ ಸತಾದ್ರು ದತ್ತ ಬುಧವಾರ ಈ ಬೆಳವಣಿಗೆಯನ್ನ ದೃಢಪಡಿಸಿದರು.
“ಭೇಟಿಯ ಬಗ್ಗೆ ಚರ್ಚಿಸಲು ಫೆಬ್ರವರಿಯಲ್ಲಿ ನಾನು ಅವರನ್ನ ಭೇಟಿಯಾದಾಗ, ಪ್ರಧಾನಿಯವರ 75ನೇ ಹುಟ್ಟುಹಬ್ಬವೂ ಬರುತ್ತಿದೆ ಎಂದು ನಾನು ಅವರಿಗೆ ಹೇಳಿದ್ದೆ, ಮತ್ತವರು ಪ್ರಧಾನಿಗೆ ಸಹಿ ಮಾಡಿದ ಜೆರ್ಸಿಯನ್ನು ಕಳುಹಿಸುವುದಾಗಿ ಹೇಳಿದರು” ಎಂದು ದತ್ತ ತಿಳಿಸಿದರು.
ಮುಂದಿನ ಎರಡು ಮೂರು ದಿನಗಳಲ್ಲಿ ಐಕಾನಿಕ್ ಜೆರ್ಸಿಯನ್ನ ಪ್ರಧಾನಿಯವರ ನಿವಾಸಕ್ಕೆ ತಲುಪಿಸುವ ನಿರೀಕ್ಷೆಯಿದೆ.
“ಕೊಡುಗೆ ನೀಡಲು ಸಿದ್ಧ” : ಹುಟ್ಟುಹಬ್ಬದ ಕರೆ ಮಾಡಿದ ಫ್ರೆಂಡ್ ‘ಪುಟಿನ್’ಗೆ ‘ಪ್ರಧಾನಿ ಮೋದಿ’ ಶಾಂತಿ ಸಂದೇಶ
ಮರು ಮತಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ದರೆ ರಾಜಕೀಯ ನಿವೃತ್ತಿ : ಕಾಂಗ್ರೆಸ್ ಶಾಸಕ ನಂಜೇಗೌಡ ಸವಾಲು
BREAKING : ಬಾಲಿವುಡ್ ನಿರ್ಮಾಪಕ ‘ಕರಣ್ ಜೋಹರ್’ಗೆ ವ್ಯಕ್ತಿತ್ವ ಹಕ್ಕುಗಳ ಕೇಸ್’ನಲ್ಲಿ ಹೈಕೋರ್ಟ್’ನಿಂದ ಬಿಗ್ ರಿಲೀಫ್