ಉತ್ತರ ಪ್ರದೇಶ : ಕಬ್ಬಡಿ ಕ್ರೀಡಾಪಟುಗಳಿಗೆ ಇಲ್ಲಿನ ಶೌಚಾಲಯದಲ್ಲಿ ಊಟದ ವ್ಯವಸ್ಥೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಹಾರನ್ ಪುರದಲ್ಲಿ ನಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡ್ತಿದೆ.
Video : ತೈವಾನ್ ನಲ್ಲಿ ಸಂಭವಿಸಿದ ಭೂಕಂಪಕ್ಕೆ 600 ಮೀಟರ್ ಉದ್ದದ ಮೆಗಾ ಸೇತುವೆ ಧ್ವಂಸ| Taiwan earthquake
ಸೆಪ್ಟೆಂಬರ್ 16 ರಂದು ಸಹರಾನ್ ಪುರದಲ್ಲಿ 17 ವರ್ಷದೊಳಗಿನವರ ರಾಜ್ಯ ಮಟ್ಟದ ಕಬ್ಬಡಿ ಟೂರ್ನಿ ನಡೆದಿದ್ದು, ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಆಹಾರ ತಯಾರಿಸಿ ಟಾಯ್ಲೆಟ್ ನಲ್ಲಿ ಇಡಲಾಗಿದೆ ಅದನ್ನೇ ಕ್ರೀಡಾಪಟುಗಳು ಬಡಿಸಿಕೊಂಡು ಊಟಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಭಾರಿ ಆಕ್ರೋಶಕ್ಕೆ ವ್ಯಕ್ತವಾಗಿದೆ.
Food served to kabaddi players in #UttarPradesh kept in toilet. Is this how #BJP respects the players? Shameful! pic.twitter.com/SkxZjyQYza
— YSR (@ysathishreddy) September 20, 2022
ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಕ್ರೀಡಾ ಅಧಿಕಾರಿಗಳು ಕ್ರೀಡಾಪಟುಗಳಿಗೆ ಉತ್ತಮವಾದ ಆಹಾರವನ್ನೇ ನೀಡಲಾಗಿದೆ ಅಲ್ಲದೆ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಕಾರಣ ಕಟ್ಟಡದ ಕೆಳ ಅಂತಸ್ಥಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ .
Video : ತೈವಾನ್ ನಲ್ಲಿ ಸಂಭವಿಸಿದ ಭೂಕಂಪಕ್ಕೆ 600 ಮೀಟರ್ ಉದ್ದದ ಮೆಗಾ ಸೇತುವೆ ಧ್ವಂಸ| Taiwan earthquake
ಆದರೆ ವಿಡಿಯೋ ದಲ್ಲಿ ಕಾಣುವಂತೆ ಅಲ್ಲಿನ ಕ್ರೀಡಾಪಟುಗಳು ಹೇಳಿಕೆ ನೀಡಿದ್ದು ಊಟಕ್ಕೆ ಸರಿಯಾದ ಜಾಗದ ವ್ಯವಸ್ಥೆಯೂ ಇರಲಿಲ್ಲ, ಆಹಾರಗಳನ್ನು ಶೌಚಾಲಯಲ್ಲೇ ಇಟ್ಟಿದ್ದರು ನಾವು ಅಲ್ಲೇ ಊಟ ಮಾಡಬೇಕಿತ್ತು, ಅಲ್ಲದೆ ಊಟದ ಗುಣಮಟ್ಟವು ಕೆಟ್ಟದಾಗಿತ್ತು ಎಂದು ದೋರಿದ್ದಾರೆ.