ಕೆಎನ್ಎನ್ ಡಿಜಿಟಲ್ ಡೆಸ್ಕ್: ಇಂದು ಬೆಳಕಿನ ಹಬ್ಬ ದೀಪಾವಳಿಯ ( Deepavali Festival ) ಸಂಭ್ರಮ. ಮಾಲಿನ್ಯ ರಹಿತವಾಗಿ ಆಚರಿಸೋ ನಿರ್ಧಾರದೊಂದಿಗೆ ಹಬ್ಬವನ್ನು ಆಚರಿಸಿ ಎಂಬುದು ನಿಮ್ಮ ಕೆಎನ್ಎನ್ ಸುದ್ದಿ ಸಂಸ್ಥೆಯ ಮನವಿ ಕೂಡ. ಈ ನಡುವೆಯೂ ದೀಪಾವಳಿ ಹಬ್ಬದಲ್ಲಿ ( Diwali Festival ) ಹಚ್ಚುವಂತ ಪಟಾಕಿಗಳು ( Firecrackers ) ಕೆಲವರ ಬಾಳನ್ನೇ ಅಂದಕಾರಕ್ಕೆ ದೂಡಬಹುದು. ಆ ಬಗ್ಗೆ ಯಾವೆಲ್ಲಾ ಸುರಕ್ಷತಾ ಕ್ರಮಗಳನ್ನು ( Firecrackers Safety Tips ) ವಹಿಸಬೇಕು ಎನ್ನುವ ಬಗ್ಗೆ ಮುಂದೆ ಓದಿ, ತಪ್ಪದೇ ಪಾಲಿಸಿ.
Mosquito Bite: ಸೊಳ್ಳೆಗಳು ಕೆಲವರಿಗೆ ಮಾತ್ರ ಯಾಕೆ ಹೆಚ್ಚು ಕಚ್ಚುತ್ತವೆ: ಇಲ್ಲಿದೆ ಅದಕ್ಕೆ ಪ್ರಮುಖ ಕಾರಣ
ದೀಪಾವಳಿ ಹಬ್ಬದಂದು ಸಿಡಿಮದ್ದು ಸೇರಿದಂತೆ ಇತರೆ ವಸ್ತುಗಳಿಂದ ಉಂಟಾಗುವಂತ ಅನಾಹುತಗಳು ಅಷ್ಟಿಷ್ಟಲ್ಲ. ಅದರಲ್ಲೂ ಪುಟ್ಟ ಮಕ್ಕಳ ಕಣ್ಣು, ಕೈ, ಮೈ ಸುಟ್ಟುಕೊಳ್ಳುವುದು ಪ್ರತಿ ವರ್ಷ ಮರುಕಳಿಸುತ್ತಲೇ ಇವೆ. ಹಬ್ಬದ ಸಂಭ್ರಮದ ಜೊತೆಗೆ ಪೋಷಕರಾದಿಯಾಗಿ, ಮಕ್ಕಳು ತಪ್ಪದೇ ಕೆಲ ಸುರಕ್ಷತಾ ಕ್ರಮಗಳನ್ನು ಅನುಸರಿಸೋ ತುರ್ತು ಅಗತ್ಯವಿದೆ. ಅವುಗಳೆಂದರೇ..
ಯುದ್ಧವನ್ನು ಮೊದಲ ಆಯ್ಕೆ ಎಂದು ಎಂದಿಗೂ ಪರಿಗಣಿಸಲಿಲ್ಲ ಆದರೆ ಕೆಣಕಿದ್ರೆ ಸರಿ ಇರೋದಿಲ್ಲ : ಪ್ರಧಾನಿ ಮೋದಿ
ಪಟಾಕಿ ಸಿಡಿಸುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು
- ದೀಪಾವಳಿ ಹಬ್ಬದಂದು ಪಟಾಕಿ ಹಚ್ಚೋ ಮುನ್ನಾ ನೀವು ನೈಲಾನ್ ಬಟ್ಟೆ ಧರಿಸೋ ಬದಲು, ಹತ್ತಿ ಬಟ್ಟೆಗಳನ್ನು ಧರಿಸಿ.
- ಹತ್ತಿ ಬಟ್ಟೆ ಧರಿಸಿದಾಗ, ಅಗ್ನಿ ಅವಘಡ ಉಂಟಾದಾಗ ಹೆಚ್ಚು ಅನಾಹುತ ಉಂಟಾಗುವುದರಿಂದ ರಕ್ಷಣೆ ಪಡೆಯಬಹುದಾಗಿದೆ.
- ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರೋದು ತಪ್ಪದೇ ಮಾಸ್ಕ್ ಧರಿಸಿ, ಪಟಾಕಿ ಹಚ್ಚೋ ಸಂಭ್ರಮದಲ್ಲಿ ಭಾಗಿಯಾಗಿ
- ಶಬ್ದದಿಂದ ನಿಮ್ಮ ಕಿವಿಯ ತಮಟೆಗೆ ತೊಂದರೆ ಆಗುವುದನ್ನು ತಪ್ಪಿಸಲು, ತಪ್ಪದೇ ಕಿವಿಯೊಳಗೆ ಹತ್ತಿಯನ್ನು ಇಟ್ಟುಕೊಳ್ಳಿ.
- ಮಕ್ಕಳು ಪಟಾಕಿಯನ್ನು ಕೈಯಲ್ಲಿ ಹಿಡಿದು ಹಚ್ಚದಂತೇ ಜಾಗ್ರತೆ ವಹಿಸಿ. ಬದಲಾಗಿ ದೂರದಿಂದ ಹೊತ್ತಿಸುವಂತ ವ್ಯವಸ್ಥೆ ಮಾಡಿ.
- ಪಟಾಕಿ ಹೊತ್ತಿಲ್ಲವೆಂದರೇ ಪರೀಕ್ಷೆಗಾಗಿ ಕೂಡಲೇ ಪ್ರಯತ್ನಕ್ಕೆ ಇಳಿಯಬೇಡಿ. ಕೊಂಚ ಕಾಯ್ದು ಆನಂತ್ರ ನೋಡಿ. ಒಂದು ವೇಳೆ ಹೊತ್ತಿಲ್ಲವಾದಲ್ಲಿ ಪುನಹ ಹೊತ್ತಿಸಿ.
- ಬಿರುಸು, ಬಾಣಗಳನ್ನು ಹಚ್ಚುವಾಗ ಜಾಗ್ರತೆ ವಹಿಸಿ. ಮುಖವನ್ನು ದೂರ ಇಟ್ಟುಕೊಂಡು ಹಚ್ಚೋದು ಮರೆಯಬೇಡಿ.
- ರಾಕೆಟ್ ಗಳನ್ನು ಬಾಟಲಿಯಲ್ಲಿ ಇಟ್ಟು ಹಾರಿಸಿ. ಖಾಲಿ ಇರುವಂತ ಸ್ಥಳವನ್ನು ನೋಡಿಕೊಂಡು ರಾಕೆಟ್ ಹೊತ್ತಿಸಿ.
- ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಿದ ಬಳಿಕ, ಸ್ವಚ್ಚವಾಗಿ ಸಾಬೂನಿನಿಂದ ಕೈತೊಳೆಯುವುದನ್ನು ಮರೆಯಬೇಡಿ.
ಪಟಾಕಿಯಿಂದ ಆಗುವಂತ ಕಣ್ಣಿನ ಹಾನಿಗೆ ಕೂಡಲೇ ಈ ಅನುಸರಿಸಿ
- ಪಟಾಕಿಯಿಂದ ಕಣ್ಣಿಗೆ ಗಾಯವಾದ್ರೇ ಕೂಡಲೇ ಕೈಯಿಂದ ಉಜ್ಜಬೇಡಿ.
- ವೈದ್ಯರ ಸಲಹೆಯಿಲ್ಲದೇ ಕಣ್ಣಿನ ಡ್ರಾಪ್ ಗಳನ್ನು ತಪ್ಪದೇ ಹಾಕಬೇಡಿ
- ಕಣ್ಣಿನೊಳಗೆ ಏನಾದರೂ ಹೊಕ್ಕಿದ್ದರೇ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
- ಪಟಾಕಿ ಅವಗಢದಿಂದ ಕಣ್ಣಿಗೆ, ಕೈ ಹಾನಿಯಾದರೇ ಕೂಡಲೇ ಆಸ್ಪತ್ರೆಗೆ ತೆರಳಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಿರಿ.
ಹಳಿ ತಪ್ಪಿದ ಗೂಡ್ಸ್ ರೈಲು : ಪ್ರಯಾಣಿಕರೇ ಗಮನಿಸಿ ; ಆರು ರೈಲುಗಳ ಸಂಚಾರ ರದ್ದು