ಹಾಸನ : ಸದ್ಯ ರಾಜ್ಯದಲ್ಲಿ ಚನ್ನಪಟ್ಟಣ ಕ್ಷೇತ್ರ ಕೇಂದ್ರ ಬಿಂದುವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ರಾಜ್ಯ ಮಾತ್ರವಲ್ಲ ಇಡೀ ದೇಶದ ಗಮನವನ್ನು ಚನ್ನಪಟ್ಟಣ ಉಪಚುನಾವಣೆ ಸೆಳೆಯುತ್ತಿದೆ. ಇತ್ತ ಸ್ವಕ್ಷೇತ್ರದಲ್ಲಿ ಮಗನನ್ನು ಗಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಹೆಚ್‌ಡಿ ಕುಮಾರಸ್ವಾಮಿ ಇಂದು ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದರು. ಈ ವೇಳೆ ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.
ಹೌದು ಹಾಸನಾಂಬೆಗೆ ಪೂಜೆ ಸಲ್ಲಿಸಿದ ಬಳಿಕ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಸ್ವಾಮಿಯ ಬಲಭಾಗದಿಂದ ಹೂ ಕೆಳಗೆ ಬಿದ್ದಿದೆ. ಇದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರಿಗೆ ಶುಭ ಸೂಚನೆ ನೀಡಿದ್ರಾ ಸಿದ್ದೇಶ್ವರ ಸ್ವಾಮಿಯವರು ಎಂಬ ಕುತೂಹಲ ಹೆಚ್ಚಿಸಿದೆ.
ಸಾಮಾನ್ಯವಾಗಿ ಹಿಂದೂ ಸಂಪ್ರದಾಯ, ಪದ್ಧತಿಗಳಲ್ಲಿ ದೇವರ ಪೂಜೆ ನಡೆಯುವ ವೇಳೆ ಪ್ರಾರ್ಥಿಸುವಾಗ ಅಕಸ್ಮಾತಾಗಿ ದೇವರ ಬಲಗಡೆಯಿಂದ ಹೂವು ಬಿದ್ದರೆ ಶುಭ ಶಕುನ ಹಾಗೂ ಮನಸಲ್ಲಿ ಬೇಡಿಕೊಂಡಿರುವ ಇಚ್ಛೆ ಪೂರ್ತಿಯಾಗುತ್ತದೆ ಎಂದು ನಂಬಿಕೆ ಇದೆ ಇದೀಗ ಹೆಚ್ ಡಿ ಕುಮಾರಸ್ವಾಮಿ ಅವರು ಸಿದ್ದೇಶ್ವರ ಸ್ವಾಮೀಜಿ ಬಳಿ ನಿಖಿಲ್ ಗೆಲುವಿಗಾಗಿ ಪ್ರಾರ್ಥಿಸಿಕೊಂಡ ವೇಳೆ ಬಲಗಡೆಯಿಂದ ಹೂ ಬಿದ್ದಿದೆ.ಹಾಗಾಗಿ ನಿಖಿಲ್ ಗೆಲುವಿಗಾಗಿ ಸಿದ್ದೇಶ್ವರ ಸ್ವಾಮೀಜಿ ಶುಭ ಸೂಚನೆ ನೀಡಿದ್ದಾರೆ ಎಂದು ಕುತೂಹಲ ಮೂಡಿಸಿದೆ.