ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ( Karnataka High Court ) ಅಕ್ಟೋಬರ್ 3ರ ನಾಳೆಯಿಂದ ಅ.7ರವರೆಗೆ ಐದು ದಿನಗಳ ಕಾಲ ದಸರಾ ರಜೆ ( Dasara Holiday ) ಇರಲಿದೆ. ಈ ಹಿನ್ನಲೆಯಲ್ಲಿ ರಜಾಕಾಲದಲ್ಲಿ ಕಾರ್ಯನಿರ್ವಹಿಸುವ ನ್ಯಾಯಪೀಠಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ರಚಿಸಿದ್ದಾರೆ.
ರಜಾ ಕಾಲದಲ್ಲಿ ನ್ಯಾಯಮೂರ್ತಿಗಳಾದ ಎಸ್ ಸುನೀಲ್ ದತ್ ಯಾದವ್ ಮತ್ತು ಟಿಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು 8ನೇ ಕೋರ್ಟ್ ಹಾಲ್ ನಲ್ಲಿ ವಿಚಾರಣೆ ನಡೆಸಲಿದೆ.
BIGG NEWS : ‘ವಿದ್ಯುತ್ ದರ ಏರಿಕೆ’ : ನಿಯಮಾವಳಿ ಬದಲಾವಣೆಗೆ ಮರು ಚಿಂತನೆ : ಸಚಿವ ಸುನೀಲ್ ಕುಮಾರ್ |Sunil Kumar
ಇನ್ನೂ ಉಳಿದಂತೆ ನ್ಯಾಯಮೂರ್ತಿಗಳಾದ ಎನ್ ಎಸ್ ಸಂಜಯ್ ಗೌಡ ಅವರು ಕೋರ್ಟ್ ಹಾಲ್ ಸಂಖ್ಯೆ-9, ಎಂ.ಜಿ ಎಸ್ ಕಮಲ್, ಕೋರ್ಟ್ ಹಾಲ್ ಸಂಖ್ಯೆ-10 ಮತ್ತು ಸಿಎಂ ಪೂಣಚ್ಚ ಅವರು ಕೋರ್ಟ್ ಹಾಲ್ ನಂ-11 ಏಕ ಸದಸ್ಯ ಪೀಠಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಳನ್ನು ನಡೆಸಲಿದ್ದಾರೆ.