ಮಹಾರಾಷ್ಟ್ರ: ಟಿವಿ ನಟಿ ತುನಿಶಾ ಶರ್ಮಾ ಟಿವಿ ಶೋ ಸೆಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಮಹಾರಾಷ್ಟ್ರದ ಆಸ್ಪತ್ರೆಗೆ ಧಾವಿಸಿದ ನಂತರ ಅವರು ಸಾವನ್ನಪ್ಪಿರೋದಾಗಿ ಘೋಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಅಲಿ ಬಾಬಾ ದಸ್ತಾನ್-ಇ-ಕಾಬೂಲ್ ನಲ್ಲಿ ಶೆಹಜಾದಿ ಮರಿಯಮ್ ಪಾತ್ರದಲ್ಲಿ ನಟಿಸುತ್ತಿದ್ದರು.
ಎಎನ್ಐ ಟ್ವೀಟ್ ಮಾಡಿದ್ದು ಟಿವಿ ನಟಿ ತುನಿಶಾ ಶರ್ಮಾ ಟಿವಿ ಧಾರಾವಾಹಿಯ ಸೆಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿಸಿದೆ.
ಭಾರತ್ ಕಾ ವೀರ್ ಪುತ್ರಾ -ಮಹಾರಾಣಾ ಪ್ರತಾಪ್ ಎಂಬ ಟಿವಿ ಶೋ ಮೂಲಕ ತುನಿಷಾ ಪಾದಾರ್ಪಣೆ ಮಾಡಿದರು. ಚಕ್ರವರ್ತಿ ಅಶೋಕ ಸಾಮ್ರಾಟ್, ಗಬ್ಬರ್ ಪೂಂಚ್ವಾಲಾ, ಶೇರ್-ಎ-ಪಂಜಾಬ್: ಮಹಾರಾಜ ರಂಜಿತ್ ಸಿಂಗ್, ಇಂಟರ್ನೆಟ್ ವಾಲಾ ಲವ್ ಮತ್ತು ಇಶ್ಕ್ ಸುಭಾನ್ ಅಲ್ಲಾಹ್ ನಂತಹ ಹಲವಾರು ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡರು.
ಕಾರಡಗಿಯಲ್ಲಿ 8 ಕೋಟಿ ರೂ. ವೆಚ್ಚದ 30 ಹಾಸಿಗೆ ಆಸ್ಪತ್ರೆ ನಿರ್ಮಾಣ – ಸಿಎಂ ಬಸವರಾಜ ಬೊಮ್ಮಾಯಿ
ಭಾರತ್ ಜೋಡೊ ಯಾತ್ರೆ: ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ ಸೂಪರ್ ಸ್ಟಾರ್ ಕಮಲ್ ಹಾಸನ್ | Bharat Jodo Yatra