ಅಥೆನ್ಸ್ (ಗ್ರೀಸ್): ಗ್ರೀಕ್ ದ್ವೀಪ ಸಮೋಸ್ನಲ್ಲಿ ಕಾಡ್ಗಿಚ್ಚಿನೊಂದಿಗೆ ಹೋರಾಡುತ್ತಿದ್ದ ಹೆಲಿಕಾಪ್ಟರ್ ಬುಧವಾರ ಪತನಗೊಂಡಿದ್ದು ಅದರಲ್ಲಿದ್ದ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಅರೇಬಿಯಾ ವರದಿ ಮಾಡಿದೆ.
ಹೆಲಿಕಾಪ್ಟರ್ ಸೋವಿಯತ್ ಯುಗದ Mi-8 ಆಗಿದ್ದು, ಉಕ್ರೇನ್ನಿಂದ ಅಗ್ನಿಶಾಮಕ ಕಾರ್ಯಾಚರಣೆಗಾಗಿ ಗುತ್ತಿಗೆ ನೀಡಲಾಗಿತ್ತು. ನಿನ್ನೆ ಸಂಜೆ 4:39 ಕ್ಕೆ ಸಮೋಸ್ನಿಂದ ಟೇಕ್ ಆಫ್ ಆಗಿದ್ದ ಹೆಲಿಕಾಪ್ಟರ್ ಸಂಜೆ 5:55ರ ಸುಮಾರಿಗೆ ಸಮುದ್ರದಲ್ಲಿ ಪತನಗೊಂದಿದೆ ಎಂದು ಮೂಲಗಳು ತಿಳಿಸಿವೆ.
ತನಿಖಾ ಅಧಿಕಾರಿಗಳ ಪ್ರಕಾರ, ರೊಮೇನಿಯನ್ ಪ್ರಜೆ ಮತ್ತು ಗ್ರೀಕ್ ಅಧಿಕಾರಿಯೊಬ್ಬರು ಮೃತಪಟ್ಟರೆ, ಇಬ್ಬರು ಮೊಲ್ಡೊವನ್ ಪ್ರಜೆಗಳು ದುರಂತ ಅಪಘಾತದಲ್ಲಿ ಬದುಕುಳಿದಿದ್ದಾರೆ. ಒಂಬತ್ತು ಹಡಗುಗಳು, ಕೋಸ್ಟ್ ಗಾರ್ಡ್ನ ಐದು, ಸೇನೆಯ ಎರಡು ಮತ್ತು ಎರಡು ಖಾಸಗಿ, ಹೆಲಿಕಾಪ್ಟರ್ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ದ್ವೀಪದ 27 ಅಗ್ನಿಶಾಮಕ ದಳದವರು ನಾಲ್ಕು ವಿಮಾನಗಳು ಮತ್ತು ಹೆಲಿಕಾಪ್ಟರ್ನೊಂದಿಗೆ ಟರ್ಕಿಯ ಕರಾವಳಿಯ ಸಮೀಪವಿರುವ ಸಮೋಸ್ನ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ಅಲ್ ಅರೇಬಿಯಾ ವರದಿ ಮಾಡಿದೆ.
ಸಮೋಸ್ ಒಂದು ಪೌರಾಣಿಕ ದ್ವೀಪವಾಗಿದ್ದು, ಟರ್ಕಿಯ ಕರಾವಳಿಯಿಂದ 1.6 ಕಿಮೀ ದೂರದಲ್ಲಿ ಏಜಿಯನ್ ಸಮುದ್ರದಲ್ಲಿದೆ. ಜಾಗತಿಕ ತಾಪಮಾನ ಹೆಚ್ಚಳ, ತೇವಾಂಶದ ಕೊರತೆ ಮತ್ತು ಒಣ ಗಾಳಿಯಿಂದಾಗಿ ಹದಗೆಡುತ್ತಿರುವ ಹವಾಮಾನ ಪರಿಸ್ಥಿತಿಗಳು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ.
Big news: ಮಹಾರಾಷ್ಟ್ರದ 7 ವರ್ಷದ ಬಾಲಕಿಯಲ್ಲಿ ʻಝಿಕಾʼ ವೈರಸ್ ಪತ್ತೆ… ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮ