ತಮಿಳುನಾಡು: ತಮಿಳುನಾಡಿನ ವಿರುದುನಗರದ ಶಿವಕಾಶಿಯಲ್ಲಿರುವ ಬದ್ರಕಾಳಿ ಅಮ್ಮನ್ ದೇವಸ್ಥಾನದ ರಾಜಗೋಪುರದಲ್ಲಿ (ದೇವಾಲಯದ ಗೋಪುರ) ಬೆಂಕಿ ಕಾಣಿಸಿಕೊಂಡಿದೆ. ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಿದ್ದಾರೆ.
ಗೋಪುರದ ನವೀಕರಣ ಕಾರ್ಯ ನಡೆಯುತ್ತಿದ್ದು, ಅದನ್ನು ಮರದ ಚೌಕಟ್ಟಿನಿಂದ ಮುಚ್ಚಲಾಗಿತ್ತು. ಘಟನೆಯ ವಿಡಿಯೋದಲ್ಲಿ ದೇವಾಲಯದ ಗೋಪುರ ಬೆಂಕಿಯಿಂದ ಆವೃತವಾಗಿರುವುದನ್ನು ನೋಡಬಹುದು.
#WATCH | Tamil Nadu: Fire broke out in the Rajagopuram (temple tower) of Badrakali Amman Temple at Sivakasi in Virudhunagar. Fire extinguished using two fire tenders. pic.twitter.com/5UNSfGvK75
— ANI (@ANI) November 20, 2022
ಭಕ್ತರು ಗೋಪುರಕ್ಕೆ ಬೆಂಕಿ ಬಿದ್ದಿರುವುದನ್ನು ಕಂಡು ದೇವಸ್ಥಾನದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತ್ರ ಘಟನಾ ಸ್ಥಳಕ್ಕೆ ಬಂದ ಎರಡು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿದರು.
ಮದುವೆಯ ಮೆರವಣಿಗೆಯ ಅಂಗವಾಗಿ ಸಿಡಿಸಲಾದ ಪಟಾಕಿಗಳು ಬೆಂಕಿಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶಿವಕಾಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರೈತರೇ ಗಮನಿಸಿ : 2022-23 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳ ಸಂರಕ್ಷಣೆಗಾಗಿ ಈ ಕ್ರಮಗಳನ್ನು ಪಾಲಿಸಿ
Viral News : 56ನೇ ವಯಸ್ಸಿನ ಮಹಿಳೆ ಜಿಮ್ನಲ್ಲಿ ‘ಸೀರೆಯಲ್ಲೇ ವರ್ಕೌಟ್’ ಮಾಡುತ್ತಿರೋ Video | Watch
World Television Day: ಇಂದು ʻವಿಶ್ವ ದೂರದರ್ಶನ ದಿನʼ: ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಪ್ರಮುಖ ಮಾಹಿತಿ
ರೈತರೇ ಗಮನಿಸಿ : 2022-23 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳ ಸಂರಕ್ಷಣೆಗಾಗಿ ಈ ಕ್ರಮಗಳನ್ನು ಪಾಲಿಸಿ