ಮುಂಬೈ: ಮುಂಬೈನ ಘಾಟ್ಕೋಪರ್ನಲ್ಲಿರುವ ಪಾರೇಖ್ ಆಸ್ಪತ್ರೆ ಬಳಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಮೀಪದ ವಿಶ್ವಾಸ್ ಕಟ್ಟಡದಲ್ಲಿರುವ ಜುನೋಸ್ ಪಿಜ್ಜಾ ರೆಸ್ಟೊರೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 22 ಜನರನ್ನು ಪರಾಖ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ಮೂವರ ಪೈಕಿ ಒಬ್ಬರನ್ನು ರಾಜವಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಿಸದೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತರನ್ನು ಖುರ್ಷಿ ದೇಧಿಯಾ ಎಂದು ಗುರುತಿಸಲಾಗಿದೆ. ಈ ಕುರಿತಂತೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ವರದಿ ಮಾಡಿದೆ.
ಘಾಟ್ಕೋಪರ್ ಪೂರ್ವ ಪ್ರದೇಶದಲ್ಲಿರುವ ಗ್ರೌಂಡ್ ಪ್ಲಸ್ ಆರು ಅಂತಸ್ತಿನ ‘ವಿಶ್ವಾಸ್’ ಕಟ್ಟಡದ ವಿದ್ಯುತ್ ಮೀಟರ್ ಕೋಣೆಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು.. ಪೊಲೀಸರು ಸೇರಿಂದತೆ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಎಂದು ತಿಳಿದು ಬಂದಿದೆ.
ಡಿ.15ರಂದು ಗುರುವಾರ ಮಧ್ಯ ಮುಂಬೈನ 61 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಈ ಘಟನೆ ನಡೆದಿದೆ.
ಮೊಟ್ಟೆಯಲ್ಲಿರೋ ‘ಹಳದಿ ಲೋಳೆ’ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ.? ಆರೋಗ್ಯ ತಜ್ಞರು ಹೇಳೋದೇನು ಗೊತ್ತಾ?
ಖಾತೆ ಮಾಡಿಕೊಡಲು 20 ಲಕ್ಷ ಲಂಚ: ನಗರಸಭೆ ಅಧ್ಯಕ್ಷೆ ಪತಿ, ಇಬ್ಬರು ಸದಸ್ಯರು ಲೋಕಾಯುಕ್ತ ಬಲೆಗೆ
BIGG NEWS: ಬಿಹಾರದಲ್ಲಿ ಅಕ್ರಮ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 70ಕ್ಕೆ ಏರಿಕೆ | Bihar LiquorTragedy