ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಮೆರವಣಿಗೆಯೊಂದರಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಗಂಗಾವತಿ ನಗರ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಈ ದೂರಿನ ಹಿನ್ನಲೆಯಲ್ಲಿ ಇದೀಗ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚಿತ್ರದುರ್ಗ ಮೂಲಕ ತುಮಕೂರು – ದಾವಣಗೆರೆ ‘ರೈಲ್ವೆ ಸಂಪರ್ಕ ಯೋಜನೆ’ ಪ್ರಾರಂಭಿಸಲು ಕ್ರಮ – ಸಿಎಂ ಬೊಮ್ಮಾಯಿ
ಕೊಪ್ಪಳ ಜಿಲ್ಲೆಯ ಗಂಗಾಗವತಿಯ ನಗರದ ಕಿಲ್ಲಾ ಏರಿಯಾದಲ್ಲಿ ಮೆರವಣಿಗೆ ಕಾರ್ಯಕ್ರಮವೊಂದರಲ್ಲಿ, ಕೇಸರಿ ಬಿಳಿ ಹಸಿರು ಬಣ್ಣದ ಧ್ವಜದಲ್ಲಿ ಅಶೋಕ ಚಕ್ರ ತೆಗೆದು, ಅರ್ಧ ಚಂದ್ರಾಕೃತಿ ಇಟ್ಟು, ಧ್ವಜವನ್ನು ಹಾರಿಸಲಾಗಿತ್ತು. ಈ ಮೂಲಕ ರಾಷ್ಟ್ರ ಧ್ವಜಕ್ಕೆ ( National Flag ) ಅಪಮಾನ ಮಾಡಲಾಗಿದ್ದು.
BIGG NEWS : ರಾಜ್ಯಾದ್ಯಂತ 10,889 ಮಸೀದಿಗಳಿಗೆ ಆಜಾನ್ ಬಳಸಲು ಅನುಮತಿ ನೀಡಿದ ಸರ್ಕಾರ
ಈ ಹಿನ್ನಲೆಯಲ್ಲಿ ಹಿಂದೂ ಪರ ಸಂಘಟನೆಯಿಂದ 1971ರ ರಾಷ್ಟ್ರಧ್ವಜ ಅಪಮಾನ ತಡೆಗಟ್ಟುವ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು. ಈ ದೂರಿನ ಹಿನ್ನಲೆಯಲ್ಲಿ ಗಂಗಾವತಿ ನಗರದ ಕಿಲ್ಲಾ ಏರಿಯಾದ ಮೊಹ್ಮದ್ ರಫಿ ನಭಿಸಾಬ, ನಭಿಸಾಬ ಖಾಸೀಂಸಾಬ, ಎಬಿಡಿ ಮೆಹೇಬೂಬ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.