ಬೆಂಗಳೂರು: ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದಂತ ಆರೋಪದ ಹಿನ್ನಲೆಯಲ್ಲಿ, ಸ್ಯಾಂಡಲ್ ವುಡ್ ನಟಿ ತಾರಾ ( Sandalwood Actress Tara ) ಅವರ ಕಾರು ಚಾಲಕನ ( Car Driver ) ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಳೆದ ಅಕ್ಟೋಬರ್ 29ರಂದು ನಟಿ ತಾರಾ ( Actress Tara ) ಅವರ ಕಾರು ಚಾಲಕ ಅಕ್ಷಯ್, ಬೆಂಗಳೂರಿನ ಕತ್ರಿಗುಪ್ಪೆಯ ಬಳಿಯಲ್ಲಿ ಹೋಗುತ್ತಿದ್ದಂತ ಸಂದರ್ಭದಲ್ಲಿ, ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದನು. ಈ ಪರಿಣಾಮ ಮುಂದೆ ಸಾಗುತ್ತಿದ್ದಂತ ಮತ್ತೊಂದು ಕಾರಿಗೆ ಗುದ್ದಿದ್ದನು. ಇದರಿಂದಾಗಿ ಗಿರೀಶ್ ಎಂಬಾತನ ಕಾರು ಜಖಂಗೊಂಡಿತ್ತು.
ಈ ವೇಳೆಯಲ್ಲಿ ಅಕ್ಷಯ್ ಕಾರು ರಿಪೇರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದ್ರೇ ಇದುವರೆಗೆ ಕಾರು ರಿಪೇರಿ ಮಾಡಿಸಿಕೊಟ್ಟಿರಲಿಲ್ಲ. ಹೀಗಾಗಿ ಜಖಂಗೊಂಡಿದ್ದಕಾರಿನ ಮಾಲೀಕ ಗಿರೀಶ್, ನಟಿ ತಾರಾ ಕಾರು ಚಾಲಕ ಅಕ್ಷಯ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಬನಶಂಕರಿ ಸಂಚಾರ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 279 ಅಡಿಯಲ್ಲಿ ಅಜಾಗರೂಕ ಚಾಲನೆ ಕೇಸ್ ದಾಖಲಿಸಿದ್ದಾರೆ.