ಬೆಳಗಾವಿ: ಚನ್ನಪಟ್ಟಣದ ಸಾಮಾಜಿಕ ಕಾರ್ಯಕರ್ತೆ ನವ್ಯಾಶ್ರೀ ವಿರುದ್ಧ FIR ವಿಚಾರಕ್ಕೆ ಸಂಬಂದಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನವ್ಯಾಶ್ರೀಗೆ ನೋಟಿಸ್ ನೀಡಲು ಎಪಿಎಂಸಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸರಿಂದ ಇಂದು ನೋಟಿಸ್ ರವಾನೆ ಸಾಧ್ಯತೆ ಇದೆ.
BIGG NEWS: ರಾಜಸ್ಥಾನದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ: ಯೆಲ್ಲೋ ಅಲರ್ಟ್ ಘೋಷಣೆ
ಅಂಚೆ ಮತ್ತು ಮೊಬೈಲ್ ಮೆಸೇಜ್ ಮೂಲಕ ನೋಟಿಸ್ ರವಾನೆಗೆ ಸಿದ್ಧತೆ ನಡೆಸಲಾಗಿದೆ. ನವ್ಯಶ್ರೀ ವಿರುದ್ಧ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ದೂರು ನೀಡಿದ್ದರು. ಅವರ ಮೇಲೆ
ಸುಲಿಗೆ, ಜೀವ ಬೆದರಿಕೆ, ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವ ಬೆದರಿಕೆ ಆರೋಪಿಸಿದ್ದಾರೆ. ನವ್ಯಶ್ರೀ ಆರ್ ರಾವ್ ಮತ್ತು ಆಕೆಯ ಸ್ನೇಹಿತ ತಿಲಕರಾಜ್ ಡಿ.ಟಿ. ವಿರುದ್ಧ ಎಫ್ಐಆರ್ ದಾಖಲಾಗಿತ್ತು. ನವ್ಯಾಶ್ರೀ ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೇ ದೂರು ನೀಡಿದ್ದ ರಾಜಕುಮಾರ ಟಾಕಳೆ. ಈ ದೂರಿನಲ್ಲಿ ಹಣಕಾಸಿನ ವ್ಯವಹಾರ, 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಉಲ್ಲೇಖಿಸಿದ್ದರು. ನವ್ಯಶ್ರೀ ವಿರುದ್ಧ ಐಪಿಸಿ ಕೇಸ್ ದಾಖಲಾಗಿತ್ತು.
BIGG NEWS: ರಾಜಸ್ಥಾನದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ: ಯೆಲ್ಲೋ ಅಲರ್ಟ್ ಘೋಷಣೆ
ಕೇಸ್ ದಾಖಲಾಗುತ್ತಿದ್ದಂತೆ ಬೆಳಗಾವಿಯಿಂದ ಬೆಂಗಳೂರಿಗೆ ತೆರಳಿದ್ದ ನವ್ಯಾಶ್ರೀ. ನಂತರ ರಾಜಕುಮಾರ ಟಾಕಳೆ ನನ್ನ ಗಂಡ, ನನಗೆ ಮೋಸ ಆಗಿದೆ ಎಂದು ಆರೋಪಿಸಿದ್ದರು. ಈ ಹಿಂದೆ ರಾಜಕುಮಾರ ಟಾಕಳೆ ಮಾಜಿ ಸಚಿವ ಶ್ರೀಮಂತ ಪಾಟೀಲ್ ಆಪ್ತ ಸಹಾಯಕರಾಗಿದ್ದರು. ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುವೆ ಅಂತಾ ಹೇಳಿ ಬೆಂಗಳೂರಿಗೆ ನವ್ಯಾಶ್ರೀ ತೆರಳಿದ್ದರು.
ಇತ್ತ, ಕಾನೂನು ಹೋರಾಟ ನಡೆಸಲು ನವ್ಯಾಶ್ರೀ ಸಹ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ರಾಜಕುಮಾರ ಟಾಕಳೆ ವಿರುದ್ಧ ಪ್ರತಿದೂರು ನೀಡಲು ತಯಾರು ಮಾಡಿಕೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಇರುವ ನವ್ಯಶ್ರೀ. ಈ ಕುರಿತು ವಕೀಲರ ಜೊತೆ ಚರ್ಚೆ ನಡೆಸುತ್ತಿದ್ದಾರೆ.