ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಏನ್ ಹೇಳಿದರು ಅಂತ ಮುಂದೆ ಓದಿ.
ಇಂದು ಪ್ರವೀಣ್ ಆತ್ಮಹತ್ಯೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವಂತ ಎಫ್ಐಆರ್ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು, ಪ್ರವೀಣ್ ನಮ್ಮ ಕಾರ್ಯಕರ್ತ ಆಗಿದ್ದಾನೆ. ಆತ ಚುನಾವಣೆಯಲ್ಲಿ ಸೋಷಿಯಲ್ ಮೀಡಿಯಾದ ಗುತ್ತಿಗೆ ತೆಗೆದುಕೊಂಡಿದ್ದನು ಎಂದರು.
ಪ್ರವೀಣ್ ವಾರ್ಡ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಂತ ಕಾರ್ಯಕರ್ತನಾಗಿದ್ದನು. ಜೂನ್, ಜುಲೈ ನಲ್ಲಿ ನಮ್ಮ ಪಕ್ಷದ ಕಚೇರಿಗೆ ಬಂದಿದ್ದನು. ಜನತಾ ದರ್ಶನದ ವೇಳೆ ನನ್ನನ್ನು ಭೇಟಿಯಾಗಿದ್ದು ನಿಜ. ನನಗೆ ಸಮಸ್ಯೆಯಾಗಿದೆ ಎಂದು ನನ್ನ ಬಳಿ ಹೇಳಿಕೊಂಡಿದ್ದನು ಎಂದು ಹೇಳಿದರು.
ಪ್ರವೀಣ್ ನೀಡಿದ್ದ ಸಂಖ್ಯೆಗೆ ಪೋನ್ ಮಾಡಿ ಹಣ ನೀಡುವಂತೆ ಹೇಳಿದ್ದೆನು. ಕೊರೋನಾ ಹಿನ್ನಲೆಯಲ್ಲಿ ಸ್ವಲ್ಪ ಸಮಯ ನೀಡುವಂತೆ ಹೇಳಿದೆ. ಬಳಿಕವೂ ಪೋನ್ ಮಾಡಿ ಕೂಡಲೇ ಹಣ ನೀಡುವಂತೆ ಹೇಳಿದ್ದೆ. ಇದಾದ ನಂತ್ರ ಭೂಮಿ ಪೂಜೆಯಲ್ಲಿ ಆತ ನನ್ನನ್ನು ಭೇಟಿಯಾಗಿದ್ದನು. ಆಗ ಸಮಸ್ಯೆ ಬಗೆಹರಿದಿದೆ ಎಂದು ನನಗೆ ಥ್ಯಾಂಕ್ಸ್ ಸಹ ಹೇಳಿದ್ದನು ಎಂದು ತಿಳಿಸಿದರು.
ಪ್ರವೀಣ್ ಕೌಟುಂಬಿಕ ಕಲಹದ ಬಗ್ಗೆಯೂ ನನಗೆ ಮಾಹಿತಿ ನೀಡಿದ್ದನು. ಆದ್ರೇ ನನ್ನ ಹೆಸರು ಡೆತ್ ನೋಟ್ ನಲ್ಲಿ ಯಾಕೆ ಉಲ್ಲೇಖಿಸಿದ್ದಾನೋ ಗೊತ್ತಿಲ್ಲ. ನಾನು ತನಿಖೆಗೆ ಸಂಪೂರ್ಣ ಸಹಕರಿಸುವುದಾಗಿ ಹೇಳಿದರು.
Railway Jobs: 4000 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ