ಕೆಎನ್ಎನ್ಡಿಜಿಟಲ್ ಡೆಸ್ಕ್ : ನಿಮ್ಮ ಪ್ರಮುಖ ಕಾರ್ಯಗಳನ್ನ ಮುಂದಿನ ತಿಂಗಳಿಗೆ ಮುಂದೂಡಲು ಯೋಚಿಸಿದ್ರೆ, ನೀವು ಈ ಸುದ್ದಿ ಓದಲೇಬೇಕು. ಯಾಕಂದ್ರೆ, ಡಿಸೆಂಬರ್ 1, 2022 ರಿಂದ, ನಿಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗಲಿವೆ. ಉದಾಹರಣೆಗೆ, ಪ್ರತಿ ತಿಂಗಳ ಮೊದಲ ದಿನಾಂಕದಂದು, ಎಲ್ಪಿಜಿ ಸಿಲಿಂಡರ್ಗಳು, ಸಿಎನ್ಜಿ, ಪಿಎನ್ಜಿ ಬೆಲೆಗಳನ್ನ ಸಾಮಾನ್ಯವಾಗಿ ನಿಗದಿಪಡಿಸಲಾಗುತ್ತದೆ. ಈ ಬಾರಿ ನವೆಂಬರ್ 30, 2022 ರೊಳಗೆ, ಪಿಂಚಣಿ ಪಡೆಯುವ ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನ ಸಲ್ಲಿಸಬೇಕು. ಈ ಜೀವಿತ ಪ್ರಮಾಣಪತ್ರವನ್ನ ಸಮಯಕ್ಕೆ ಸಲ್ಲಿಸದಿದ್ದರೆ, ನಿಮ್ಮ ಪಿಂಚಣಿ ನಿಲ್ಲಬೋದು. ಇನ್ನು ಇದರೊಂದಿಗೆ ಡಿಸೆಂಬರ್ನಲ್ಲಿ 13 ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಿರುತ್ತವೆ.
ಜೀವ ಪ್ರಮಾಣಪತ್ರ ಸಲ್ಲಿಸಿ.!
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಿಂಚಣಿ ಪಡೆಯುವ ವ್ಯಕ್ತಿಗಳು ವಾರ್ಷಿಕವಾಗಿ ಜೀವ ಪ್ರಮಾಣಪತ್ರವನ್ನ ಸಲ್ಲಿಸಬೇಕು. ಪಿಂಚಣಿದಾರರು ಈ ಪ್ರಮಾಣಪತ್ರವನ್ನ 30 ನವೆಂಬರ್ 2022ರೊಳಗೆ ಸಲ್ಲಿಸಬೇಕು. ಇದಕ್ಕಾಗಿ, ಪಿಂಚಣಿದಾರರು ಬ್ಯಾಂಕ್ ಶಾಖೆಗೆ ಅಥವಾ ಆನ್ಲೈನ್ಗೆ ಭೇಟಿ ನೀಡುವ ಮೂಲಕ ಜೀವನ ಪ್ರಮಾಣಪತ್ರವನ್ನ ಸಲ್ಲಿಸಬಹುದು. ಇದರಿಂದ ಅವರ ಪಿಂಚಣಿ ನಿಲ್ಲುವುದಿಲ್ಲ ಮತ್ತು ಯಾವುದೇ ತೊಂದರೆ ಆಗೋದಿಲ್ಲ. ಅಂದ್ಹಾಗೆ, ಈ ಕೆಲಸವನ್ನ ನವೆಂಬರ್ 30ರವರೆಗೆ ಮಾತ್ರ ಮಾಡಬಹುದಾಗಿದೆ.
ಬ್ಯಾಂಕ್ಗಳಲ್ಲಿ 13 ದಿನ ಕೆಲಸ ಬಂದ್.!
ಈ ವರ್ಷ ಡಿಸೆಂಬರ್ನಲ್ಲಿ ಒಟ್ಟು 13 ದಿನ ಬ್ಯಾಂಕ್ಗಳ ಕೆಲಸ ಬಂದ್ ಆಗಲಿದೆ. 13 ದಿನಗಳ ಬ್ಯಾಂಕ್ ರಜಾದಿನಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರದಂದು ವಾರಾಂತ್ಯದ ರಜಾದಿನಗಳಾಗಿವೆ. ಕ್ರಿಸ್ಮಸ್, ವರ್ಷದ ಕೊನೆಯ ದಿನ ಮತ್ತು ಗುರು ಗೋವಿಂದ್ ಸಿಂಗ್ ಅವರ ಜನ್ಮದಿನವೂ ಡಿಸೆಂಬರ್ ತಿಂಗಳಿನಲ್ಲಿ ಬರುತ್ತಿದೆ, ಈ ದಿನ ಬ್ಯಾಂಕ್ಗಳಿಗೆ ರಜೆ ಇರುತ್ತದೆ. ಭಾರತದಲ್ಲಿನ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕುಗಳು ರಜಾದಿನಗಳಲ್ಲಿ ಮುಚ್ಚಿರುತ್ತವೆ. ಕೆಲವು ಬ್ಯಾಂಕುಗಳು ಸ್ಥಳೀಯ ಹಬ್ಬಗಳು ಮತ್ತು ರಜಾದಿನಗಳನ್ನ ಆಚರಿಸುತ್ತವೆ ಮತ್ತು ಆ ದಿನ ರಾಜ್ಯದಲ್ಲಿ ಮುಚ್ಚಿರುತ್ತವೆ. ಬ್ಯಾಂಕ್ಗಳು ಮುಚ್ಚಿದಾಗ, ಆನ್ಲೈನ್ ಬ್ಯಾಂಕಿಂಗ್ ಮೂಲಕ ನಿಮ್ಮ ಹೆಚ್ಚಿನ ಕೆಲಸವನ್ನ ನೀವು ಇತ್ಯರ್ಥ ಪಡಿಸಿಕೊಳ್ಳಬೋದು.
CNG-PNG ಬೆಲೆಗಳಲ್ಲಿನ ಬದಲಾವಣೆಗಳು.!
ದೇಶದಾದ್ಯಂತ ಪ್ರತಿ ತಿಂಗಳ ಮೊದಲ ದಿನಾಂಕ ಅಥವಾ ಮೊದಲ ವಾರದಲ್ಲಿ ಹೆಚ್ಚಾಗಿ ಬದಲಾಗುತ್ತವೆ. ದೆಹಲಿ ಮತ್ತು ಮುಂಬೈನಲ್ಲಿ ತಿಂಗಳ ಮೊದಲ ವಾರದಲ್ಲಿ ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಬೆಲೆಯನ್ನು ಬದಲಾಯಿಸುತ್ತವೆ ಎಂದು ತಿಳಿದಿರಬಹುದು. ಕಳೆದ ಕೆಲವು ತಿಂಗಳುಗಳಲ್ಲಿ, ದೆಹಲಿ-ಎನ್ಸಿಆರ್ ಮತ್ತು ಮುಂಬೈನಲ್ಲಿ ಸಿಎನ್ಜಿ ಮತ್ತು ಪಿಎನ್ಜಿ ಬೆಲೆಗಳು ಹೆಚ್ಚಾಗಿದೆ.
ಎಲ್ಪಿಜಿ ಬೆಲೆ ನಿಗದಿ.!
ಎಲ್ಪಿಜಿ ಗ್ಯಾಸ್ ಸಿಲಿಂಡರ್ನ ಬೆಲೆಯನ್ನ ಪ್ರತಿ ತಿಂಗಳ ಮೊದಲ ದಿನಾಂಕದಂದು ನಿಗದಿಪಡಿಸಲಾಗುತ್ತದೆ. ಕೇಂದ್ರ ಸರ್ಕಾರ ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್ಗಳ (19 ಕೆಜಿ) ಬೆಲೆಯನ್ನ ಕಡಿಮೆ ಮಾಡಿತ್ತು. 14 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಾರಿಯೂ ತೈಲ ಕಂಪನಿಗಳು ಬೆಲೆ ಇಳಿಕೆ ಮಾಡುವ ನಿರೀಕ್ಷೆ ಇದೆ.
ಚಿತ್ರದುರ್ಗದಲ್ಲಿ ‘ಲೋಕಾಯುಕ್ತ’ ದಾಳಿ : ಲಂಚ ಸ್ವೀಕರಿಸುತ್ತಿದ್ದ ಇಬ್ಬರು ‘PDO’ ಅಧಿಕಾರಿಗಳು ವಶಕ್ಕೆ
BREAKING NEWS: ಬೆಂಗಳೂರು ವೋಟರ್ ಐಡಿ ಪರಿಷ್ಕರಣೆ ಅಕ್ರಮ: ಸಿಇಸಿಯಿಂದ ಇಬ್ಬರು ಚುನಾವಣಾಧಿಕಾರಿಗಳ ಅಮಾನತು