ಕೆಎನ್ಎನ್ಡಿಜಿಟಲ್ಡೆಸ್ಕ್: ಹೊರಬಂತು ನೈಜ ಘಟನೆ ಆಧಾರಿತ ‘ತನುಜಾ’ ಟ್ರೇಲರ್ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಹಳ್ಳಿಗಾಡಿನ ವಿದ್ಯಾರ್ಥಿನಿ ಒಬ್ಬಳು ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಬರೆದ ರೋಚಕ ನೈಜ ಘಟನೆಯನ್ನು ಆಧರಿಸಿ ನಿರ್ಮಿಸಲಾದ ‘ತನುಜಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಆರೋಗ್ಯ ಸಚಿವ ಡಾ. ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮೊದಲಾದ ಗಣ್ಯರ ಸಮ್ಮುಖದಲ್ಲಿ ‘ತನುಜಾ’ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಯಿತು. ‘ಬಿಯಾಂಡ್ ವಿಷನ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಚಂದ್ರಶೇಖರ ಗೌಡ, ಮನೋಜ್ ಬಿ. ಜಿ ನಿರ್ಮಾಣ ಮಾಡಿರುವ ‘ತನುಜಾ’ ಚಿತ್ರಕ್ಕೆ ಹರೀಶ್ ಎಂ. ಡಿ ಹಳ್ಳಿ ನಿರ್ದೇಶನವಿದೆ.
ಮಹಿಳಾ ಪ್ರದಾನ ಕಥಾಹಂದರ ಹೊಂದಿರುವ ‘ತನುಜಾ’ ಚಿತ್ರದಲ್ಲಿ ಸಪ್ತಾ ಪಾವೂರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ಚಿತ್ಕಲಾ ಬಿರಾದಾರ್, ಸಂಧ್ಯಾ, ಸತೀಶ್, ಮುಂತಾದವರು ‘ತನುಜಾ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಸಿದ್ದಾರೆ. ಇನ್ನೊಂದು ವಿಶೇಷವೆಂದರೆ, ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಸುಧಾಕರ್, ಪತ್ರಕರ್ತ ವಿಶ್ವೇಶ್ವರ ಭಟ್ ಕೂಡಾ ‘ತುಜಾ’ ಚಿತ್ರದಲ್ಲಿ ಅತಿಥಿ ಕಲಾವಿದರಾಗಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
‘ತನುಜಾ’ ಚಿತ್ರಕ್ಕೆ ರವೀಂದ್ರನಾಥ ಟಿ ಛಾಯಾಗ್ರಹಣ, ಉಮೇಶ್ ಆರ್. ಬಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಪ್ರದ್ಯೂತನ್ ಸಂಗೀತ ಸಂಯೋಜನೆಯಿದ್ದು, ಜಯಂತ ಕಾಯ್ಕಿಣಿ ಸಾಹಿತ್ಯವಿದೆ. ಅಂದಹಾಗೆ, ಟ್ರೇಲರ್ ಬಿಡುಗಡೆ ಮಾಡಿರುವ ‘ತನುಜಾ’ ಚಿತ್ರವನ್ನು ಹೊಸವರ್ಷದ ಆರಂಭದಲ್ಲಿ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ.