Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಬೆಚ್ಚಿ ಬೀಳಿಸೋ ಕೃತ್ಯ : ಇಟ್ಟಿಗೆಯಿಂದ ಜಜ್ಜಿ ನಾಲ್ವರು ಮಕ್ಕಳ ಬರ್ಬರ ಹತ್ಯೆ, ತಾಯಿ ನಾಪತ್ತೆ.!

03/05/2026 1:39 PM

ಬೆಂಗಳೂರಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದಕ್ಕೆ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ!

03/05/2026 1:27 PM

ನೀವು `ಫಿಟ್’ ಆಗಿದ್ದೀರಾ ಎಂದು ಸೂಚಿಸುವ 10 ಪ್ರಮುಖ ಚಿಹ್ನೆಗಳು ಇವು.!

03/05/2026 1:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದಕ್ಕೆ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ!
KARNATAKA

ಬೆಂಗಳೂರಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದಕ್ಕೆ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ!

By kannadanewsnow0503/05/2026 1:27 PM

ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ತಂದೆಯೊಬ್ಬ ತನ್ನ ಸ್ವಂತ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಭೀಕರ ಘಟನೆ ಸಿಲಿಕಾನ್ ಸಿಟಿಯ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೇ 1ರ ಬುಧವಾರ ರಾತ್ರಿ ಪ್ರಗತಿಪುರದಲ್ಲಿ ಈ ಅಮಾನವೀಯ ಕೃತ್ಯ ನಡೆದಿದ್ದು, ಇಡೀ ಬಡಾವಣೆಯನ್ನು ಬೆಚ್ಚಿಬೀಳಿಸಿದೆ.

ಘಟನೆಯ ವಿವರ: ಪ್ರಗತಿಪುರ ನಿವಾಸಿ ಆನಂದ್ ದೊಡ್ಡಮನಿ (45) ಎಂಬುವವರೇ ಮಗನ ಮೇಲೆ ಹಲ್ಲೆ ಮಾಡಿದ ಆರೋಪಿ ತಂದೆ. ಆನಂದ್ ಅವರ ಮಗ ಮಲ್ಲಿಕಾರ್ಜುನ್ (19) ತನ್ನ ತಂದೆಯ ಅನುಮತಿ ಪಡೆಯದೆ ಮನೆಯಲ್ಲಿದ್ದ ಬೈಕ್ ತೆಗೆದುಕೊಂಡು ಹೊರಗೆ ಹೋಗಿದ್ದ ಎನ್ನಲಾಗಿದೆ. ರಾತ್ರಿ ಮಗ ಮನೆಗೆ ವಾಪಸ್ ಬಂದಾಗ ಇದೇ ವಿಷಯವಾಗಿ ತಂದೆ ಮತ್ತು ಮಗನ ನಡುವೆ ತೀವ್ರ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಆನಂದ್, ಮಗನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಇಬ್ಬರಿಗೂ ಗಂಭೀರ ಗಾಯ: ಬೆಂಕಿ ಹೊತ್ತಿಕೊಂಡ ತಕ್ಷಣ ಮಲ್ಲಿಕಾರ್ಜುನ್ ಕಿರುಚಾಡಲಾರಂಭಿಸಿದ್ದಾನೆ. ಈ ಸಂದರ್ಭದಲ್ಲಿ ಮಗನನ್ನು ಹಿಡಿದುಕೊಂಡಿದ್ದ ತಂದೆ ಆನಂದ್ ಅವರಿಗೂ ಬೆಂಕಿ ತಗುಲಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಗನ ಪರಿಸ್ಥಿತಿ ತೀರಾ ಚಿಂತಾಜನಕವಾಗಿದ್ದು, ಆತನ ದೇಹದ ಹೆಚ್ಚಿನ ಭಾಗ ಸುಟ್ಟುಹೋಗಿದೆ ಎಂದು ತಿಳಿದುಬಂದಿದೆ. ಸದ್ಯ ಇಬ್ಬರನ್ನೂ ಚಿಕಿತ್ಸೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗಕ್ಕೆ ದಾಖಲಿಸಲಾಗಿದೆ.

ಪೊಲೀಸ್ ತನಿಖೆ: ವಿಷಯ ತಿಳಿಯುತ್ತಿದ್ದಂತೆಯೇ ಕುಮಾರಸ್ವಾಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಹೇಳಿಕೆಗಳನ್ನು ಪಡೆಯಲು ಮುಂದಾಗಿದ್ದಾರೆ.

Share. Facebook Twitter LinkedIn WhatsApp Email

Related Posts

ನೀವು `ಫಿಟ್’ ಆಗಿದ್ದೀರಾ ಎಂದು ಸೂಚಿಸುವ 10 ಪ್ರಮುಖ ಚಿಹ್ನೆಗಳು ಇವು.!

03/05/2026 1:26 PM2 Mins Read

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಹಾಜರಾತಿ’ ಬಗ್ಗೆ ಇಲ್ಲಿದೆ ಬಿಗ್ ಅಪ್ ಡೇಟ್.!

03/05/2026 1:07 PM2 Mins Read

BREAKING : ಶಿವಮೊಗ್ಗದಲ್ಲಿ ಘೋರ ಘಟನೆ : ಹಾವು ಕಚ್ಚಿ 6 ತಿಂಗಳ ಗರ್ಭಿಣಿ ಸಾವು!

03/05/2026 12:54 PM1 Min Read
Recent News

SHOCKING : ಬೆಚ್ಚಿ ಬೀಳಿಸೋ ಕೃತ್ಯ : ಇಟ್ಟಿಗೆಯಿಂದ ಜಜ್ಜಿ ನಾಲ್ವರು ಮಕ್ಕಳ ಬರ್ಬರ ಹತ್ಯೆ, ತಾಯಿ ನಾಪತ್ತೆ.!

03/05/2026 1:39 PM

ಬೆಂಗಳೂರಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದಕ್ಕೆ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ!

03/05/2026 1:27 PM

ನೀವು `ಫಿಟ್’ ಆಗಿದ್ದೀರಾ ಎಂದು ಸೂಚಿಸುವ 10 ಪ್ರಮುಖ ಚಿಹ್ನೆಗಳು ಇವು.!

03/05/2026 1:26 PM

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಹಾಜರಾತಿ’ ಬಗ್ಗೆ ಇಲ್ಲಿದೆ ಬಿಗ್ ಅಪ್ ಡೇಟ್.!

03/05/2026 1:07 PM
State News
KARNATAKA

ಬೆಂಗಳೂರಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದಕ್ಕೆ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ!

By kannadanewsnow0503/05/2026 1:27 PM KARNATAKA 1 Min Read

ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ತಂದೆಯೊಬ್ಬ ತನ್ನ ಸ್ವಂತ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಭೀಕರ ಘಟನೆ ಸಿಲಿಕಾನ್…

ನೀವು `ಫಿಟ್’ ಆಗಿದ್ದೀರಾ ಎಂದು ಸೂಚಿಸುವ 10 ಪ್ರಮುಖ ಚಿಹ್ನೆಗಳು ಇವು.!

03/05/2026 1:26 PM

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಹಾಜರಾತಿ’ ಬಗ್ಗೆ ಇಲ್ಲಿದೆ ಬಿಗ್ ಅಪ್ ಡೇಟ್.!

03/05/2026 1:07 PM

BREAKING : ಶಿವಮೊಗ್ಗದಲ್ಲಿ ಘೋರ ಘಟನೆ : ಹಾವು ಕಚ್ಚಿ 6 ತಿಂಗಳ ಗರ್ಭಿಣಿ ಸಾವು!

03/05/2026 12:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.